alex Certify ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ್ದಕ್ಕೆ ಹತಾಶನಾದ ಡೆಲಿವರಿ ಬಾಯ್..​..! ಮುಂದೇನಾಯ್ತು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದ್ದಕ್ಕೆ ಹತಾಶನಾದ ಡೆಲಿವರಿ ಬಾಯ್..​..! ಮುಂದೇನಾಯ್ತು ನೋಡಿ

ಕೊರೊನಾ ಸಂಕಷ್ಟದ ಸಮಯದಲ್ಲಿ ತುರ್ತು ಸಿಬ್ಬಂದಿ ಕಷ್ಟಪಟ್ಟಂತೆಯೇ ಡೆಲಿವರಿ ಬಾಯ್ಸ್ ಕೂಡ ತಮ್ಮ ಕರ್ತವ್ಯವನ್ನ ನಿಭಾಯಿಸೋಕೆ ಹರಸಾಹಸ ಪಟ್ಟಿದ್ದಾರೆ.

ಕೋವಿಡ್​ 19 ಮಹಾಮಾರಿಯಿಂದಾಗಿ ಡೆಲಿವರಿ ಬಾಯ್​ಗಳ ಕೆಲಸದ ಅವಧಿ ಕಳೆದ 10 ತಿಂಗಳಿನಿಂದ ಹೆಚ್ಚಾಗಿದೆ.
ಕೆಲ ಸಂಸ್ಥೆಗಳಲ್ಲಿ ಡೆಲಿವರಿ ಬಾಯ್​ಗಳನ್ನ 12 – 15 ಗಂಟೆಗಳ ಅವಧಿಯವರೆಗೆ ದುಡಿಸಿಕೊಳ್ಳಲಾಗ್ತಿದೆ.

ಬರೋಬ್ಬರಿ 10 ತಿಂಗಳುಗಳ ಕಾಲ ಹೆಚ್ಚುವರಿ ಅವಧಿ ಕೆಲಸ ಮಾಡೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ.

ಇಷ್ಟೊಂದು ದೀರ್ಘ ಅವಧಿಯಲ್ಲಿ ಕೆಲಸ ಮಾಡಿದ ಸಿಬ್ಬಂದಿಗೆ ಎಲ್ಲಾ ಗ್ರಾಹಕರು ಟಿಪ್ಸ್ ನೀಡುತ್ತಾರೆ ಎಂದೂ ಹೇಳೋಕಾಗಲ್ಲ. ಕೆಲ ದಿನಗಳ ಹಿಂದಷ್ಟೇ ಭಾರೀ ಮಳೆಯ ನಡುವೆಯೂ ಡಾಮಿನೋಸ್​ ಚಾಲಕ ಹೆಚ್ಚು ಸಾಮಗ್ರಿಗಳನ್ನ ಡೆಲಿವರಿ ಮಾಡಿದ್ರು.

ಆದರೆ ಅವರ ಈ ಪರಿಶ್ರಮಕ್ಕೆ ಟಿಪ್ಸ್ ಸಿಕ್ಕಿಲ್ಲ ಎಂಬ ಕಾರಣಕ್ಕೆ ಆ ಡೆಲಿವರಿ ಬಾಯ್​ ತಮ್ಮ ನೋವನ್ನ ಹೊರ ಹಾಕಿದ್ದಾರೆ. ಸಂಪೂರ್ಣ ಭಾವುಕನಾಗಿದ್ದ ಡೆಲಿವರಿ ಬಾಯ್​ ಗ್ರಾಹಕರ ಎದುರಲ್ಲೇ ತನ್ನ ನೋವನ್ನ ಹೊರಹಾಕಿದ್ದು ಈ ವಿಡಿಯೋ ಸಖತ್​ ವೈರಲ್​ ಆಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...