alex Certify ‘ಕ್ವಾರಂಟೈನ್’ ಉಲ್ಲಂಘನೆಗೆ ವಿಧಿಸಲಾಗುತ್ತೆ ಭಾರಿ ದಂಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕ್ವಾರಂಟೈನ್’ ಉಲ್ಲಂಘನೆಗೆ ವಿಧಿಸಲಾಗುತ್ತೆ ಭಾರಿ ದಂಡ

Violated Self-isolation Rules in Britain? Get Ready to Pay up to Over $12,000 as Fine

ಕೊರೊನಾ ವೈರಸ್‌ ಹಬ್ಬುವುದನ್ನು ತಡೆಗಟ್ಟಲು ಸರ್ಕಾರಗಳು ಅದೆಷ್ಟೇ ಕ್ರಮ ತೆಗೆದುಕೊಳ್ಳುತ್ತಿದ್ದರೂ ಸಹ, ಲಾಕ್‌ಡೌನ್‌ಗೆ ಸಾರ್ವಜನಿಕರಿಂದ ಸರಿಯಾದ ಬೆಂಬಲ ಎಲ್ಲ ಕಡೆಯೂ ಸಿಗುತ್ತಿಲ್ಲ.

ಅಗತ್ಯವಿದ್ದಾಗ ಸ್ವಯಂ ದಿಗ್ಬಂಧಿಗಳಾಗಲು ಸೂಚಿಸಿದರೂ ಸಹ ಈ ಆದೇಶದ ಉಲ್ಲಂಘನೆ ಮಾಡುವವರಿಗೆ 10,000 ಪೌಂಡ್‌(9,51,152.50 ರೂ.) ದಂಡ ವಿಧಿಸಲು ಇಂಗ್ಲೆಂಡ್‌ನಲ್ಲಿ ನಿಯಮ ಜಾರಿಗೆ ತರಲಾಗಿದೆ. 1000 ಪೌಂಡ್‌ನಿಂದ-10000 ಪೌಂಡ್‌ಗಳವರೆಗೂ, ಈ ತಪ್ಪನ್ನು ಪದೇ ಪದೇ ಮಾಡಿದವರ ಮೇಲೆ ದಂಡ ವಿಧಿಸಲಾಗುತ್ತದೆ.

ವೈರಸ್‌‌ನ ಹಾಟ್‌ಸ್ಪಾಟ್‌ಗಳಲ್ಲಿ, ಸ್ಥಳೀಯ ಗುಪ್ತಚರ ಇಲಾಖೆಗಳ ನೆರವಿನಿಂದ ಪೊಲೀಸರು ತೀವ್ರ ನಿಗಾ ಇಟ್ಟಿದ್ದು, ಕೋವಿಡ್‌-19ಗೆ ಪಾಸಿಟಿವ್‌ ಆಗಿ ಕಂಡುಬಂದವರ ಮೇಲೆ ಈ ನಿಯಮ ಅನ್ವಯವಾಗಲಿದೆ. ಕೋವಿಡ್-19 ಪರೀ‌ಕ್ಷೆಯಲ್ಲಿ ಪಾಸಿಟವ್‌ ಕಂಡು ಬಂದ ಬಳಿಕ ತಮ್ಮ ಸಂಪರ್ಕಕ್ಕೆ ಬಂದ ವ್ಯಕ್ತಿಗಳ ಬಗ್ಗೆ ಸರಿಯಾದ ಮಾಹಿತಿ ನೀಡದೇ ಇದ್ದರೂ ಸಹ ನಿಯಮದ ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...