alex Certify ಸಮುದ್ರದಲ್ಲಿ ವಿಮಾನ ತುರ್ತು ಸ್ಪರ್ಶ..! ವೈರಲ್​ ಆಯ್ತು ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಮುದ್ರದಲ್ಲಿ ವಿಮಾನ ತುರ್ತು ಸ್ಪರ್ಶ..! ವೈರಲ್​ ಆಯ್ತು ವಿಡಿಯೋ

ಕೋಕಾ ಬೀಚ್​ ಏರ್​ ಶೋನಲ್ಲಿ ಭಾಗಿಯಾಗಿದ್ದ 2ನೇ ವಿಶ್ವ ಯುದ್ಧದ ಏರ್​ಕ್ರಾಫ್ಟ್​ ಸೋಮವಾರ ಫ್ಲೋರಿಡಾದ ಸಮುದ್ರದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಯುಟ್ಯೂಬ್​ನಲ್ಲಿ ಶೇರ್​ ಮಾಡಲಾದ ವಿಡಿಯೋದಲ್ಲಿ, ವಿಮಾನವು ನಿಧಾನವಾಗಿ ಸಮುದ್ರದಲ್ಲೇ ಲ್ಯಾಂಡ್​ ಆಗ್ತಿರೋದನ್ನ ನೀವು ನೋಡಬಹುದಾಗಿದೆ.

ಅದೃಷ್ಟವಶಾತ್​ ಈ ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. ಸವಾಲಿನ ಸ್ಥಿತಿಯಲ್ಲೂ ಸಮುದ್ರದಲ್ಲಿ ಅತ್ಯಂತ ನಾಜೂಕಾಗಿ ವಿಮಾನ ಸ್ಪರ್ಶ ಮಾಡಿದ ಪೈಲಟ್​​ ಚಾಣಕ್ಷತೆಗೆ ನೆಟ್ಟಿಗರು ತಲೆ ಬಾಗಿದ್ದಾರೆ.

ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು, ನನಗೆ ವಿಮಾನದಲ್ಲಿ ಹಾರಾಡಿ ಅನುಭವವಿಲ್ಲ. ಆದರೆ ಈ ಲ್ಯಾಂಡಿಂಗ್​ ಮಾತ್ರ ನೋಡೋಕೆ ಬಹಳ ಸೊಗಸಾಗಿದೆ ಎಂದು ವರ್ಣಿಸಿದ್ದಾರೆ.

ಇನ್ನು ಈ ವಿಚಾರವಾಗಿ ಹೇಳಿಕೆ ನೀಡಿರುವ ಕೋಕಾ ಬೀಚ್​ ಏರ್​ ಷೋ ಅಧಿಕಾರಿಗಳು, ವಾರ್​ಬರ್ಡ್​ ಪರೇಡ್​​ನಲ್ಲಿ ಏರ್​ಕ್ರಾಫ್ಟ್​ ಭಾಗಿಯಾಗಿದ್ದ ವೇಳೆ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆ ಈ ಘಟನೆ ಸಂಭವಿಸಿದೆ ಎಂದು ಹೇಳಿದೆ.

ಪೈಲಟ್​ ವಿಮಾನವನ್ನ ಸುರಕ್ಷಿತವಾಗಿ ಲ್ಯಾಂಡ್ ಮಾಡಿದ್ದಾರೆ. ಸಮುದ್ರದಲ್ಲಿ ವಿಮಾನ ಭೂಸ್ಪರ್ಶ ಮಾಡುತ್ತಿದ್ದಂತೆಯೇ ರಕ್ಷಣಾ ಸಿಬ್ಬಂದಿ ಪೈಲಟ್​​ನ ರಕ್ಷಣೆಗೆ ಧಾವಿಸಿದ್ದಾರೆ. ಎರಡನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಈ ವಿಮಾನವನ್ನ ಅಮೆರಿಕ ಬಳಕೆ ಮಾಡಿತ್ತು. ಏರ್​ ಶೋಗೆ ಈ ವಿಮಾನವನ್ನ ಬಳಕೆ ಮಾಡುವ ಮುನ್ನ ಇದನ್ನ ಸಂಪೂರ್ಣ ರಿಪೇರಿ ಮಾಡಲಾಗಿತ್ತು ಎಂದು ಕೋಕಾ ಬೀಚ್​ ಏರ್​ ಶೋ ತನ್ನ ಅಧಿಕೃತ ವೆಬ್​ಸೈಟ್​ನಲ್ಲಿ ಮಾಹಿತಿ ನೀಡಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...