ಯುಎಸ್ ಬೋಸ್ಟನ್ ಎಂಐಟಿಯ ವಿಜ್ಞಾನಿಗಳು ಕೊರೊನಾ ಫೇಸ್ ಮಾಸ್ಕ್ ತಡೆಗೆ ಹೊಸ ಮಾದರಿಯ ಮಾಸ್ಕ್ ವಿನ್ಯಾಸಗೊಳಿಸಿದ್ದಾರೆ. ಈ ಮಾಸ್ಕ್ ಕೊರೊನಾ ವೈರಸ್ ದೇಹದೊಳಕ್ಕೆ ಪ್ರವೇಶಿಸೋದನ್ನ ತಡೆಯೋದರ ಜೊತೆಗೆ ವೈರಸ್ಗಳನ್ನ ತನ್ನ ಶಾಖದಿಂದ ನಿಷ್ಕ್ರಿಯಗೊಳಿಸುವ ಸಾಮರ್ಥ್ಯವನ್ನೂ ಹೊಂದಿದೆ.
ಹೊಸ ವಿನ್ಯಾಸದ ಈ ಮಾಸ್ಕ್ನಲ್ಲಿ ತಾಮ್ರದ ಜಾಲರಿಯನ್ನ ಅಳವಡಿಸಲಾಗಿದೆ. ಈ ಮಾಸ್ಕ್ನ್ನ ಮರುಬಳಕೆ ಮಾಡಬಹುದಾಂತಹ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಫೇಸ್ಮಾಸ್ಕ್ ಧರಿಸಿದ ವ್ಯಕ್ತಿ ಉಸಿರಾಡುತ್ತಿದ್ದಂತೆಯೇ ವೈರಲ್ ಕಣಗಳು ಜಾಲರಿ ಮೂಲಕ ಹರಿದಾಡುತ್ತದೆ. ಈ ವೇಳೆ ಮಾಸ್ಕ್ನಲ್ಲಿ ತಾಪಮಾನ ಹೆಚ್ಚೋದ್ರಿಂದ ವೈರಸ್ಗಳು ನಿಷ್ಕ್ರಿಯಗೊಳ್ಳುತ್ತದೆ ಅಂತಾ ಸಂಶೋಧಕರು ತಿಳಿಸಿದ್ದಾರೆ.
ಆದರೆ ಈ ಮಾಸ್ಕ್ ಸದ್ಯ ಪ್ರಯೋಗ ಹಂತದಲ್ಲಿದ್ದು, ಇವುಗಳ ಪರೀಕ್ಷೆ ಯಶಸ್ವಿ ಬಳಿಕೆ ಮಾರುಕಟ್ಟೆಗಳಲ್ಲಿ ಸಿಗಲಿದೆ ಅಂತಾ ಸಂಶೋಧಕರು ಹೇಳಿದ್ದಾರೆ .