alex Certify ಕೊರೊನಾ ಸಂಕಷ್ಟದ ನಡುವೆಯೂ ಬದುಕು ಕಟ್ಟಿಕೊಂಡ ಇರಾನ್​ ಮಹಿಳೆಯರು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊರೊನಾ ಸಂಕಷ್ಟದ ನಡುವೆಯೂ ಬದುಕು ಕಟ್ಟಿಕೊಂಡ ಇರಾನ್​ ಮಹಿಳೆಯರು…!

ವಿಶ್ವದ ಉಳಿದ ರಾಷ್ಟ್ರಗಳಂತೆ ಇರಾನ್​ನಲ್ಲೂ ಕೂಡ ಕೊರೊನಾ ವೈರಸ್​ ತನ್ನ ರುದ್ರ ನರ್ತನವನ್ನ ತೋರಿಸುತ್ತಲೇ ಬಂದಿದೆ.

ಈ ಸಂಕಷ್ಟದ ನಡುವೆ ಮಹಿಳೆಯರ ಗುಂಪೊಂದು ಮಾಸ್ಕ್​​ಗಳನ್ನ ತಯಾರಿಸಿ ಮಾರಾಟ ಮಾಡುವ ಮೂಲಕ ತಮ್ಮ ಬದುಕನ್ನ ಕಟ್ಟಿಕೊಳ್ತಿದ್ದಾರೆ.

2016ರಲ್ಲಿ ನಿರ್ಮಾಣವಾದ ಬವಾರ್(ನಂಬಿಕೆ)​ ಎಂಬ ಹೆಸರಿನ ಈ ಸಂಸ್ಥೆ ಅನೇಕ ಮಹಿಳೆರಿಗೆ ಹೊಲಿಗೆ ಯಂತ್ರಗಳನ್ನ ದೇಣಿಗೆ ನೀಡೋದ್ರ ಮೂಲಕ ಅವರಿಗೆ ನೆರವಾಗಿದೆ. ವಿಧವೆಯರಿಗೆ, ಆರ್ಥಿಕ ಸಂಕಷ್ಟದಲ್ಲಿರುವ ಮಹಿಳೆಯರ ಕಲ್ಯಾಣಕ್ಕೆ ಈ ಸಂಸ್ಥೆ ಶ್ರಮಿಸುತ್ತಿದೆ.

ಬವಾರ್​ ಸಂಸ್ಥೆ ಸಂಸ್ಥಾಪಕಿ ಸಾರಾ ಚತರ್​ಬಿಯಾನ್​ ಈ ವಿಚಾರವಾಗಿ ಮಾತನಾಡಿ ಸಂಕಷ್ಟದಲ್ಲಿರುವವರಿಗೆ ಮೀನು ನೀಡೋ ಬದಲು ಮೀನುಗಾರಿಕೆಯನ್ನ ಕಲಿಸಿದ್ರೆ ಅವರು ಬದುಕನ್ನ ಸ್ವತಂತ್ರ್ಯವಾಗಿ ಕಟ್ಟಿಕೊಳ್ತಾರೆ. ಅದೇ ರೀತಿ ನಾವು ಕೂಡ ಮಹಿಳೆಯರಿಗೆ ಬದುಕುವ ದಾರಿಯನ್ನ ತೋರಿಸಿಕೊಡ್ತಿದ್ದೇವೆ ಎಂದು ಹೇಳಿದ್ರು.

ಇರಾನ್​​ನಲ್ಲಿ ಕೊರೊನಾ ಪ್ರಕರಣ ಜಾಸ್ತಿಯಾಗ್ತಾನೇ ಇದ್ದು ಮಾಸ್ಕ್​ಗಳಿಗೆ ಬೇಡಿಕೆ ಹೆಚ್ಚಾಗುತ್ತಲೇ ಇದೆ. ಹೀಗಾಗಿ ಸುಮಾರು 50 ಮಂದಿಯಿರುವ ಮಹಿಳೆಯರ ಗುಂಪು ಹೊಲಿಗೆ ಯಂತ್ರದಲ್ಲಿ ಮಾಸ್ಕ್​​ಗಳನ್ನ ತಯಾರಿಸಿ ಫಾರ್ಮಾ ಕಂಪನಿಗಳಿಗೆ ಮಾರುತ್ತಾರೆ. ಫಾರ್ಮಾ ಕಂಪನಿಗಳು ಇದಕ್ಕೆ ಮೂರನೇ ಲೇಯರ್​ನ್ನ ಹಾಕಿ ಅದನ್ನ ಮಾರಾಟ ಮಾಡುತ್ತಿದೆ. ಈ ಗುಂಪಿನಲ್ಲಿನ 41 ವರ್ಷದ ಮಹಿಳೆ ಎಲ್ಹಾಮ್​ ಕರಮಿ ಈ ವಿಚಾರವಾಗಿ ಮಾತನಾಡಿ ಬವಾರ್​ ಸಂಸ್ಥೆಯಿಂದ ನನ್ನ ಇಬ್ಬರು ಮಕ್ಕಳನ್ನ ಸಾಕೋದು ಅನುಕೂಲವಾಗಿದೆ ಎಂದು ಸಂತಸ ಹೊರಹಾಕಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...