alex Certify ಶಾಲೆಯಲ್ಲಿನ ಸಾಮಾಜಿಕ ಅಂತರಕ್ಕೆ ಶಿಕ್ಷಕನ ಮಸ್ತ್ ಪ್ಲಾನ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಯಲ್ಲಿನ ಸಾಮಾಜಿಕ ಅಂತರಕ್ಕೆ ಶಿಕ್ಷಕನ ಮಸ್ತ್ ಪ್ಲಾನ್‌

US Teacher Called 'Hero' for Turning COVID-19 Partitions in Class ...

ವಿಶ್ವದಲ್ಲಿ ಕಾಣಿಸಿಕೊಂಡಿರುವ ಕೊರೊನಾದ ಆಫ್ಟರ್‌ ಎಫೆಕ್ಟ್‌ ಇದೀಗ ಭಾರಿ ಕುತೂಹಲ ಮೂಡಿಸಿದೆ. ಎಲ್ಲೆಡೆ ಸಾಮಾಜಿಕ ಅಂತರದ ಬಗ್ಗೆ ಚರ್ಚೆ ಶುರುವಾಗಿದೆ. ಇದೀಗ ಶಾಲೆಯಲ್ಲಿ ಯಾವ ರೀತಿ ಅಳವಡಿಸಬೇಕು ಎನ್ನುವ ಪ್ರಶ್ನೆಗೆ ಅಮೆರಿಕ ಶಿಕ್ಷಕನೊಬ್ಬರು ವಿನೂತನ ಪ್ಲಾನ್‌ ನೀಡಿದ್ದಾರೆ.

ಹೌದು, ಸಾಮಾಜಿಕ ಜಾಲತಾಣದಲ್ಲಿ ರೆಕ್ಸ್‌ ಚಾಂಪ್‌ಮ್ಯಾನ್‌ ಶೇರ್‌ ಮಾಡಿರುವ ವಿಡಿಯೊದಲ್ಲಿ, ಅಮೆರಿಕದ ಶಾಲೆಯೊಂದರಲ್ಲಿ ಮಕ್ಕಳಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ ಪ್ರತ್ಯೇಕ ಗಾಜಿನ ಕ್ಯಾಬಿನ್‌ ಆರಂಭಿಸಿದೆ. ಆದರೆ ಮಕ್ಕಳಿಗೆ ಇದರಿಂದ ಹೆದರಿಕೆಯಾಗಬಾರದು ಎನ್ನುವ ಉದ್ದೇಶದಿಂದ, ಟ್ರಂಕ್ ಎಂಜಿನ್‌ ರೀತಿ ಮಾರ್ಪಾಡು ಮಾಡಲಾಗಿದೆ. ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.

ಶಿಕ್ಷಕರ ಈ ಯೋಚನೆಗೆ ನೆಟ್ಟಿಗರು ಶಹಬಾಸ್‌ಗಿರಿ ನೀಡಿದ್ದು, ಈ ವಿನೂತನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ವಿಡಿಯೊ ಇದೀಗ ಸುಮಾರು 3.3 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಸುಮಾರು 1.20 ಲಕ್ಷ ಲೈಕ್‌ ಹಾಗೂ 20 ಸಾವಿರಕ್ಕೂ ಹೆಚ್ಚು ಕಾಮೆಂಟ್‌ಗಳು ಬಂದಿದ್ದು, ಭಾರಿ ವೈರಲ್‌ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...