ಹೊಸದಾಗಿ ವಾಹನ ಖರೀದಿಸಿರುತ್ತೀರಿ. ಅದಕ್ಕೆ ಯಾವುದಾದರೂ ಪ್ರಾಣಿ ಗುದ್ದಿದರೆ ಏನನ್ನಿಸಬೇಡ ? ಬಹಳ ಮಂದಿ ವಾಹನವನ್ನೇ ಮಾರಿಬಿಡುತ್ತಾರೆ. ಅಮೆರಿಕಾದ ವ್ಯಕ್ತಿಯೊಬ್ಬನದೂ ಇದೇ ಪಾಡು. ಕೆಲಸದ ನಿಮಿತ್ತ ದಾರಿಯಲ್ಲಿ ಹೋಗುತ್ತಿದ್ದ ಆತನ ಹೊಸ ಕಾರಿಗೆ ಜಿಂಕೆಗಳೆರಡು ಬಂದು ಗುದ್ದಿವೆ. ಇಡೀ ದಿನ ಆತ ಬೇಸರದಲ್ಲೇ ಕಾಲ ಕಳೆಯುವಂತಾಗಿತ್ತು.
ಆತಂಕಕ್ಕೆ ಕಾರಣವಾಗಿದೆ ಮಹಾಮಾರಿ ʼಕೊರೊನಾʼದ ಹೊಸ ಲಕ್ಷಣ
ಉತ್ತರ ಕೆರೊಲಿನಾದ ಆಂಥೋನಿ ಡೋವ್ ಎಂಬಾತ ತನ್ನ ಇಡೀ ದಿನ ಹಾಳಾಯಿತ್ತಲ್ಲಾ ಎಂದು ಕೊರಗುತ್ತಾ ಕುಳಿತಿದ್ದ. ಬೇಸರದಲ್ಲೇ ಮಲಗಿದ. ಸ್ವಲ್ಪ ಸಮಯದ ನಂತರ ಎಚ್ಚೆತ್ತು ಕಿಸೆಗೆ ಕೈ ಹಾಕಿದ್ದಾನೆ.
ಹಿಂದೆ ಖರೀದಿಸಿದ್ದ ನಾಲ್ಕು ಲಾಟರಿ ಟಿಕೆಟ್ ಗಳು ಸಿಕ್ಕಿವೆ. ಸುಮ್ಮನೆ ಫಲಿತಾಂಶ ನೋಡೋಣ ಎಂದು ಹುಡುಕಿದ್ದಾನೆ. ಪ್ರತಿ ಟಿಕೆಟ್ ಮೇಲಿನ ಸಂಖ್ಯೆ ನೋಡುವಾಗಲೂ ಬಹುಮಾನದ ಆಸೆ ಬಂದಿರಲಿಲ್ಲ.
‘ಡೇಟಿಂಗ್’ APP ನಿಂದ ಭಾರತೀಯರು ದೂರವಿರುವುದರ ಹಿಂದಿನ ಕಾರಣ ಬಹಿರಂಗ
ನಾಲ್ಕನೇ ಟಿಕೆಟ್ ನೋಡುವಾಗ ಮೊದಲ ಸಂಖ್ಯೆ ತಾಳೆಯಾಯಿತು. ಅಲ್ಲಿಂದ ಉತ್ಸುಕನಾದ ಆಂಥೋನಿ ಎಲ್ಲ ಸಂಖ್ಯೆಗಳನ್ನು ಗಮನಿಸಿದಾಗ ಬಂಪರ್ ಲಾಟರಿ ಡ್ರಾ ಆಗಿತ್ತು.
2 ದಶಲಕ್ಷ ಡಾಲರ್ ಬಹುಮಾನ ಬಂದಿರುವುದನ್ನು ಕಂಡು ಖುಷಿಪಟ್ಟ ಆತ, ತೆರಿಗೆ ಕಳೆದು 1.4 ದಶಲಕ್ಷ ಡಾಲರ್ ತೆಗೆದುಕೊಂಡ. ಅಪ್ಪ, ಅಮ್ಮ ಎಲ್ಲರ ಆಸೆ ಈಡೇರಿಸಿ, ತನ್ನ ಆಸೆಗಳನ್ನೂ ಪೂರೈಸಿಕೊಂಡು, ಭವಿಷ್ಯಕ್ಕಾಗಿ ಕೂಡಿಸುವುದಾಗಿ ಸಂತಸ ಹಂಚಿಕೊಂಡ.