alex Certify ‘ಡೇಟಿಂಗ್’​ APP ನಿಂದ ಭಾರತೀಯರು ದೂರವಿರುವುದರ ಹಿಂದಿನ ಕಾರಣ ಬಹಿರಂಗ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಡೇಟಿಂಗ್’​ APP ನಿಂದ ಭಾರತೀಯರು ದೂರವಿರುವುದರ ಹಿಂದಿನ ಕಾರಣ ಬಹಿರಂಗ

ಬಹುತೇಕ ಭಾರತೀಯರು ಆನ್​ಲೈನ್​ನಲ್ಲಿ ಫುಡ್​ ಆರ್ಡರ್ ಮಾಡುವ ಪ್ರಕ್ರಿಯೆ ಸುರಕ್ಷಿತವೆಂದು ನಂಬಿದ್ದಾರೆ. ಆದರೆ ಡೇಟಿಂಗ್​ ಅಪ್ಲಿಕೇಶನ್​ಗಳ ವಿಚಾರದಲ್ಲಿ ಮಾತ್ರ ಭಾರತೀಯರಿಗೆ ಅಷ್ಟೊಂದು ನಂಬಿಕೆ ಇಲ್ಲ ಅನ್ನೋ ವಿಚಾರ ಸರ್ವೇಯೊಂದರಿಂದ ಬಯಲಾಗಿದೆ.

ನಾಲ್ಕರಲ್ಲಿ ಮೂರು ಮಂದಿ ಅಂದರೆ ಸುಮಾರು 75 ಪ್ರತಿಶತ ಮಂದಿ ಸೈಬರ್​ ಅಪರಾಧಕ್ಕೆ ಬಲಿಯಾಗುವ ಭಯವನ್ನ ಹೊಂದಿದ್ದಾರೆ. ಇನ್ನು ಉಳಿದ 20 ಪ್ರತಿಶತ ಮಂದಿ ಸೈಬರ್​ ದಾಳಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯ ನಮಗಿಲ್ಲ ಎಂದಿದ್ದಾರೆ. 2021ರ ಗ್ರಾಹಕರ ಭದ್ರತಾ ಮನೋಭಾವ ಈ ವರದಿಯನ್ನ ನೀಡಿದೆ.

ಕ್ರೆಡಿಟ್ ಕಾರ್ಡ್​ ಬಳಕೆದಾರರಿಗೆ ತಿಳಿದಿರಲಿ ಈ ಮಾಹಿತಿ

78 ಪ್ರತಿಶತ ಭಾರತೀಯರು ತಮ್ಮ ಹಣಕಾಸಿನ ವ್ಯವಹಾರ, ಕ್ರೆಡಿಟ್​ ಕಾರ್ಡ್​ ಹಾಗೂ ಬ್ಯಾಂಕಿಂಗ್​ ಮಾಹಿತಿ ಲೀಕ್​ ಆಗಬಹುದು ಎಂಬ ಭಯವನ್ನ ಹೊಂದಿದ್ದಾರೆ. 74 ಪ್ರತಿಶತ ಮಂದಿ ತಮ್ಮ ವೈಯಕ್ತಿ ದಾಖಲೆಗಳು ಹ್ಯಾಕ್​ ಆಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಸಮಸ್ಯೆಯಿಂದ ಪಾರಾಗಲು ದಾರಿ ಹುಡುಕೋಕಿಂತ ಸಮಸ್ಯೆಗೆ ಸಿಲುಕದೇ ಇರೋದೇ ಒಳ್ಳೆಯದು. ಹೀಗಾಗಿ ಯಾವುದೇ ವೆಬ್​ಸೈಟ್​ಗಳ ಮೇಲೆ ಕ್ಲಿಕ್​ ಮಾಡುವ ಇಲ್ಲವೇ ಅಪ್ಲಿಕೇಶನ್​ಗಳನ್ನ ಇನ್​ಸ್ಟಾಲ್​ ಮಾಡುವ ಮುನ್ನ ನೂರು ಬಾರಿ ಯೋಚಿಸಿ ಎಂದು ತಜ್ಞರು ಸಲಹೆ ನೀಡಿದ್ದಾರೆ.

ನಮ್ಮ ಗೌಪ್ಯ ವಿಚಾರಗಳನ್ನ ಕಾಪಾಡಿಕೊಂಡಷ್ಟೂ ನಮ್ಮ ಮನಸ್ಥಿತಿ ಶಾಂತವಾಗಿ ಇರುತ್ತೆ. ಈ ವಿಚಾರದಲ್ಲಿ ಭಾರತೀಯರು ಉತ್ತಮ ಮನಸ್ಥಿತಿ ಹೊಂದಿದ್ದಾರೆ ಎಂದು ಅಧ್ಯಯನ ಹೇಳಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...