alex Certify ಗ್ರೀನ್ ಕಾರ್ಡ್ ರಗಳೆಯಿಂದ ಅಮೆರಿಕ ಕನಸು ನುಚ್ಚುನೂರಾದ ಭಾರತೀಯರಿಗೆ ಸಿಕ್ತು ಭರ್ಜರಿ ಆಫರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗ್ರೀನ್ ಕಾರ್ಡ್ ರಗಳೆಯಿಂದ ಅಮೆರಿಕ ಕನಸು ನುಚ್ಚುನೂರಾದ ಭಾರತೀಯರಿಗೆ ಸಿಕ್ತು ಭರ್ಜರಿ ಆಫರ್

US dream shattered, Indians find greener pastures in Canada ...

ಹೈದರಾಬಾದ್: ಅಮೆರಿಕದಲ್ಲಿ ಹೆಚ್ -1 ಬಿ ವೀಸಾ, ಗ್ರೀನ್ ಕಾರ್ಡ್ ರಗಳೆಗೆ ಬೇಸತ್ತ ಬಹುತೇಕ ಭಾರತೀಯರು ಅಮೆರಿಕ ತೊರೆಯಲು ಮುಂದಾಗಿದ್ದಾರೆ. ಈಗ ಕೆನಡಾ ನೆಚ್ಚಿನ ಉದ್ಯೋಗದ ನೆಲೆಯಾಗಿದೆ.

ಅಮೆರಿಕದಲ್ಲಿರುವ ಅನೇಕ ಭಾರತೀಯ ಕುಟುಂಬಗಳು ಕೆನಡಾಕ್ಕೆ ವಾಸ್ತವ್ಯ ಬದಲಿಸತೊಡಗಿವೆ. ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ಗ್ರೀನ್ ಕಾರ್ಡ್ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದ ಭಾರತೀಯರಿಗೆ ಭ್ರಮನಿರಸನವಾಗಿದೆ.

ಸುಮಾರು 20 ಸಾವಿರ ಭಾರತೀಯರು ಪ್ರತಿವರ್ಷ ಕೆನಡಾಕ್ಕೆ ಅಮೆರಿಕದಿಂದ ತೆರಳುತ್ತಿದ್ದು, ಅಲ್ಲಿ ನೆಲೆ ಕಂಡುಕೊಂಡಿದ್ದಾರೆ. ಕಳೆದ 8 ವರ್ಷದ ಅವಧಿಯಲ್ಲಿ ಶೇಕಡ 50 ರಷ್ಟು ಅಮೆರಿಕದಲ್ಲಿನ ಭಾರತೀಯರ ಜನಸಂಖ್ಯೆ ಇಳಿಮುಖವಾಗಿದೆ.

ಗ್ರೀನ್ ಕಾರ್ಡ್ ಇಲ್ಲದಿದ್ದರೆ ಅಮೆರಿಕದಲ್ಲಿ ಉನ್ನತ ಹುದ್ದೆ ಸಿಗಲ್ಲ ಎಂಬ ಕಾರಣಕ್ಕೆ ಅನೇಕರು ಕೆನಡಾದತ್ತ ನೆಲೆ ಬದಲಿಸತೊಡಗಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...