alex Certify ಬಾಹ್ಯಾಕಾಶ ನೌಕೆಯಿಂದಲೇ ಮತ ಚಲಾಯಿಸಿದ ಗಗನಯಾತ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಹ್ಯಾಕಾಶ ನೌಕೆಯಿಂದಲೇ ಮತ ಚಲಾಯಿಸಿದ ಗಗನಯಾತ್ರಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ದಿನಗಣನೆ ಶುರುವಾಗಿದೆ. ಈ ನಡುವೆ ನಾಸಾ ಗಗನಯಾತ್ರಿಯೊಬ್ಬರು ಗಗನಯಾನದಲ್ಲಿದ್ದುಕೊಂಡೇ ಮತ ಚಲಾವಣೆ ಮಾಡಿದ್ದಾರೆ. ಭೂಮಿಯಿಂದ 408 ಕಿಲೋಮೀಟರ್​ ದೂರದಲ್ಲಿದ್ದು ಮತ ಚಲಾಯಿಸೋ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.

ಇನ್ನು ಈ ಸಂಬಂಧ ಟ್ವೀಟ್​ ಮಾಡಿರುವ ಕೇಟ್​ ರೂಬಿನ್ಸ್, ತಾವು ಗಗನಯಾನದಲ್ಲಿರುವ ಫೋಟೋ ಶೇರ್​ ಮಾಡಿ ನಾನು ಮತ ಚಲಾಯಿಸಿದೆ ಅಂತಾ ಬರೆದುಕೊಂಡಿದ್ದಾರೆ.

6 ತಿಂಗಳ ಬಾಹ್ಯಾಕಾಶ ಯಾನದಲ್ಲಿರುವ ರೂಬಿನ್ಸ್ ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಿಂದ ಮತಚಲಾಯಿಸಿದ್ದಾರೆ. ಟೆಕ್ಸಾಸ್​ ಕಾಯ್ದೆ ಅನ್ವಯ ಬಾಹ್ಯಾಕಾಶದಲ್ಲಿದ್ದರೂ ಮತ ಚಲಾವಣೆ ಮಾಡಬಹುದು.

ಈ ಹಿಂದೆಯೂ ಈ ವಿಚಾರವಾಗಿ ಮಾತನಾಡಿದ್ದ ರೂಬಿನ್ಸ್, ಬಾಹ್ಯಾಕಾಶದಲ್ಲಿದ್ದೇ ನಾವು ಮತ ಚಲಾಯಿಸೋದಾದ್ರೆ ಭೂಮಿಯಲ್ಲಿ ಇರುವ ನೀವು ಖಂಡಿತವಾಗಿ ಈ ಕೆಲಸ ಮಾಡಬಹುದು ಅಂತಾ ಹೇಳಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...