alex Certify ಇರಾನ್​ ಬೆದರಿಕೆ ನಡುವೆಯೂ ಮಧ್ಯಪ್ರಾಚ್ಯದಲ್ಲೇ ಉಳಿದ ಅಮೆರಿಕ ವಿಮಾನ ವಾಹಕ ನೌಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇರಾನ್​ ಬೆದರಿಕೆ ನಡುವೆಯೂ ಮಧ್ಯಪ್ರಾಚ್ಯದಲ್ಲೇ ಉಳಿದ ಅಮೆರಿಕ ವಿಮಾನ ವಾಹಕ ನೌಕೆ

ಇರಾನ್​​ನ ನಿರಂತರ ಬೆದರಿಕೆಗಳ ನಡುವೆಯೂ ಅಮೆರಿಕದ ವಿಮಾನ ವಾಹಕ ನೌಕೆ ಯುಎಸ್​ಎಸ್​ ನಿಮಿಟ್ಜ್​​​ ಗಲ್ಫ್​​ನಲ್ಲೇ ಉಳಿಯಲಿದೆ ಎಂದು ಅಮೆರಿಕ ರಕ್ಷಣಾ ಇಲಾಖೆ ಮಾಹಿತಿ ನೀಡಿದೆ.

ಅಮೆರಿಕ ವಿಮಾನ ವಾಹಕ ನೌಕೆಯನ್ನ ಮಧ್ಯಪ್ರಾಚ್ಯದಿಂದ ಹೊರಹಾಕಲು ಆದೇಶಿಸಿದ ಕೆಲ ದಿನಗಳ ನಂತರ ದೇಶದ ರಕ್ಷಣಾ ಕಾರ್ಯದರ್ಶಿ ಕ್ರಿಸ್ಟೋಫರ್​ ಮಿಲ್ಲರ್​ ಆ ನಿರ್ಧಾರವನ್ನ ಹಿಂಪಡೆದಿದ್ದಾರೆ.

ಈ ವಿಚಾರವಾಗಿ ಭಾನುವಾರ ರಾತ್ರಿ ಮಾತನಾಡಿದ ಮಿಲ್ಲರ್​, ಡೊನಾಲ್ಡ್​ ಟ್ರಂಪ್​ ಹಾಗೂ ಅಮೆರಿಕದ ಅಧಿಕಾರಿಗಳಿಗೆ ಇರಾನ್​​ನಿಂದ ತೀರಾ ಇತ್ತೀಚಿಗೆ ಬರುತ್ತಿರುವ ಬೆದರಿಕೆಗಳು ಬರುತ್ತಿವೆ. ಆದಾಗ್ಯೂ ಯುಎಸ್​ಎಸ್​ ನಿಮಿಟ್ಜ್​​ ಯುಎಸ್​​​ ಸೆಂಟ್ರಲ್​​ ಕಮಾಂಡ್​ ಕಾರ್ಯಾಚರಣೆಯ ನಿಲ್ದಾಣದಲ್ಲಿ ಉಳಿಯಲಿದೆ ಎಂದು ಹೇಳಿದ್ದಾರೆ.

ಕಳೆದ ವರ್ಷ ಇರಾನ್​ನ ಜನರಲ್​​ ಕಾಸೆಮ್​ ಸೂಲೈಮಾನಿ ಹತ್ಯೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಆಶ್ಚರ್ಯಕರ ರೀತಿಯಲ್ಲಿ ವಾಷಿಂಗ್ಟನ್​ ಹಾಗೂ ಟೆಹ್ರಾನ್​ ನಡುವೆ ಉದ್ವಿಗ್ನತೆ ಹೆಚ್ಚಾಗಿತ್ತು.

2020ರ ಕೊನೆಯ ದಿನಗಳಲ್ಲಿ ಅಮೆರಿಕ ಬಿ 25 ಪರಮಾಣು ಸಾಮರ್ಥ್ಯದ ಬಾಂಬರ್​ಗಳನ್ನ ಮಧ್ಯಪ್ರಾಚ್ಯಕ್ಕೆ ಹಾರಿಸಿತು. ಇದರಿಂದ ಆಕ್ರೋಶಗೊಂಡ ಇರಾನ್​ ಹಿರಿಯ ಮಿಲಿಟರಿ ಸಲಹೆಗಾರ, ಟ್ರಂಪ್ ಹೊಸ ವರ್ಷವನ್ನ ಅಮೆರಿಕದ ಪಾಲಿಗೆ ಶೋಕವನ್ನಾಗಿ ಪರಿವರ್ತನೆ ಮಾಡದಿರಿ ಎಂದು ಟ್ವೀಟಾಯಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...