alex Certify ಫಿಟ್ ಆಗಿದ್ದೇನೆಂದು ತೋರಿಸಲು ಪುಷ್ ಅಪ್ ಮಾಡಿದ ಪಿಎಂ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಿಟ್ ಆಗಿದ್ದೇನೆಂದು ತೋರಿಸಲು ಪುಷ್ ಅಪ್ ಮಾಡಿದ ಪಿಎಂ

UK's Boris Johnson Does Push-ups to Show Off Covid-19 Recovery ...

 

ಏಪ್ರಿಲ್ ತಿಂಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ ಯುಕೆ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ತಾವು ಫಿಟ್ ಆಗಿದ್ದೇನೆ ಎಂದು ತೋರಿಸಲು ಪುಷ್ ಅಪ್ ಮಾಡಿದ್ದಾರೆ.

ಹೌದು, ಜನರನ್ನು ಸೆಳೆಯಲು ಸದಾ ಒಂದಿಲ್ಲೊಂದು ಚಟುವಟಿಕೆಗಳನ್ನು ಮಾಡುವ ಬೋರಿಸ್, ಈ ಬಾರಿ ಪತ್ರಿಕೆ ಒಂದಕ್ಕೆ ಸಂದರ್ಶನ ನೀಡುವಾಗ, ಕೊರೋನಾದಿಂದ ಗುಣಮುಖರಾಗಿದ್ದೀರಾ ಎನ್ನುವ ಪ್ರಶ್ನೆಗೆ ಪುಷ್ ಅಪ್ ಮಾಡಿ, ಸಂಪೂರ್ಣ ಗುಣಮುಖನಾಗಿದ್ದೇನೆ ಎಂದು ತೋರಿಸಿದ್ದಾರೆ.

ಇನ್ನು ಕೊರೋನಾ ವಿರುದ್ಧದ ಹೋರಾಟದಲ್ಲಿ ಇಡೀ ದೇಶ ಇದೇ ರೀತಿ ಮೇಲೆದ್ದು ಬರಲಿದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದು ಅವರು ತಿಳಿಸಿದ್ದು, ಪ್ರಧಾನಿಯ‌ ಈ ಪುಷ್ ಅಪ್ ಫೋಟೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...