alex Certify ಕೈಕೋಳ ಹಾಕಿಕೊಂಡು ಪ್ರೇಮಪರೀಕ್ಷೆ ಮಾಡಿಕೊಂಡ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಕೋಳ ಹಾಕಿಕೊಂಡು ಪ್ರೇಮಪರೀಕ್ಷೆ ಮಾಡಿಕೊಂಡ ಜೋಡಿ

Image result for Ukrainian Couple Handcuff Themselves Together For 3 Months in Ultimate Test of Love

ನಿಮ್ಮ ಪ್ರೇಮದ ಆಳ ಎಷ್ಟು ಎಂದು ಅರಿಯಲು ಏನೆಲ್ಲಾ ಹುಚ್ಚಾಟಗಳನ್ನು ಆಡುವ ಆಲೋಚನೆ ನಿಮ್ಮ ಮನದಲ್ಲಿ ಬಂದಿರಬಹುದು? ಉಕ್ರೇನ್‌ನ ಜೋಡಿಯೊಂದು ತಮ್ಮ ಪ್ರೇಮದ ಆಳವನ್ನು ಪರೀಕ್ಷಿಸಲು ಅತಿರೇಕದ ಪರೀಕ್ಷೆಯೊಂದನ್ನು ಮಾಡಿದೆ.

ಪ್ರೇಮಿಗಳ ದಿನದಂದು ಅಲೆಕ್ಸಾಂಡರ್‌ ಹಾಗೂ ವಿಕ್ಟೋರಿಯಾ ಹೆಸರಿನ ಈ ಜೋಡಿ ಕ್ಯಿವ್‌ ನಗರದಲ್ಲಿರುವ ಯುನಿಟಿ ಪ್ರತಿಮೆ ಬಳಿ ತಮ್ಮ ಕೈಗಳನ್ನು ವೆಲ್ಡ್‌ ಮಾಡಿಕೊಳ್ಳಲು ನಿರ್ಧರಿಸಿದೆ. ಇಬ್ಬರ ಕೈಗಳೂ ಕೆಲವೇ ಸೆಂಮೀ ದೂರವಿದ್ದವು ಎಂದು ಈ ಪ್ರಯೋಗದ ಉಸ್ತುವಾರಿ ನೋಡಿಕೊಂಡ ಉಕ್ರೇನ್‌ನ ರಾಷ್ಟ್ರೀಯ ನೋಂದಣಿಯ ವಿಟಲೇ ಜೋರಿನ್‌ ತಿಳಿಸಿದ್ದಾರೆ.

ಜೋಡಿಯ ಕೈಗಳನ್ನು ಒಂದೆಡೆ ಸೇರಿಸುವ ಮುನ್ನ ಇಬ್ಬರ ಮಾನಸಿಕ ಆರೋಗ್ಯವನ್ನು ಜೋರಿನ್ ಪರೀಕ್ಷಿಸಿದ್ದಾರೆ.

‘ಸೌಂದರ್ಯ’ದ ಮೂಲಕವೇ ಫೇಮಸ್​ ಆಗಿದ್ದಾಳೆ ಈ ಬಸ್​ ಚಾಲಕಿ…!

ತಂತಮ್ಮ ಕೈಗಳನ್ನು ಹೀಗೆ ಬೇಡಿಗೆ ಹಾಕಿಕೊಂಡು ಬರೊಬ್ಬರಿ ಮೂರು ತಿಂಗಳು ಕಳೆದಿದೆ ಈ ಜೋಡಿ. ಇದೇ ವೇಳೆ ಟಾಯ್ಲೆಟ್‌ಗೆ ಹೋಗುವಾಗ ಗಂಡಸರ/ಹೆಂಗಸರ ಶೌಚಾಲಯವೋ ಎಂಬ ಪ್ರಶ್ನೆ ಬಂದಾಗ ಈ ಜೋಡಿ ಹೆಂಗಸರ ಶೌಚಾಲಯ ಆರಿಸಿಕೊಂಡಿದ್ದು, ಕ್ಲೀನರ್‌ಗಳನ್ನು ಬೆಚ್ಚಿ ಬೀಳಿಸಿದೆ.

ಹಾಗೇ ಸ್ನಾನ ಮಾಡುವಾಗ ಸಹ ತಂತಮ್ಮ ಸರದಿಗೆ ಕಾಯುತ್ತಾ ಇದ್ದು, ಬಟ್ಟೆ ಒಗೆಯುವಾಗಲೂ ಇಂಥದ್ದೇ ಹೆಜ್ಜೆಯನ್ನು ಈ ಜೋಡಿ ಅನುಸರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...