alex Certify ‘ಸೌಂದರ್ಯ’ದ ಮೂಲಕವೇ ಫೇಮಸ್​ ಆಗಿದ್ದಾಳೆ ಈ ಬಸ್​ ಚಾಲಕಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಸೌಂದರ್ಯ’ದ ಮೂಲಕವೇ ಫೇಮಸ್​ ಆಗಿದ್ದಾಳೆ ಈ ಬಸ್​ ಚಾಲಕಿ…!

ಬಸ್​ ಡ್ರೈವರ್​ ಅಂದಾಕ್ಷಣ ನಿಮಗೆ ಏನು ನೆನಪಿಗೆ ಬರುತ್ತೆ..? ಖಾಕಿ ಬಣ್ಣ ಇಲ್ಲವೇ ಬಿಳಿ ಬಣ್ಣದ ಸಮವಸ್ತ್ರ ತೊಟ್ಟ ವ್ಯಕ್ತಿ ಅಲ್ಲವೇ..? ಆದರೆ ಇಂಗ್ಲೆಂಡ್​ನ ಈ ಮಹಿಳಾ ಡ್ರೈವರ್​ ಮಾತ್ರ ತನ್ನ ಸೌಂದರ್ಯದ ಮೂಲಕವೇ ಎಲ್ಲರ ಹುಬ್ಬೇರುವಂತೆ ಮಾಡ್ತಿದ್ದಾರೆ.

24 ವರ್ಷದ ಜೋಡ್​ ಲೇಹ್​ ಫಾಕ್ಸ್​ ಎಂಬಾಕೆ 21 ವರ್ಷದವಳಗಾಗಿದ್ದಾಗಲೇ ಡ್ರೈವರ್ ಕೆಲಸ ಆರಂಭಿಸಿದ್ದಾಳೆ. ಬಸ್​ನ ಹಿಂಭಾಗದಲ್ಲಿ ಹಾಕಿದ್ದ ಉದ್ಯೋಗಾವಕಾಶದ ಜಾಹಿರಾತನ್ನ ನೋಡಿ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ ಈಕೆ ಚಾಲಕಳಾಗಿ ಆಯ್ಕೆಯಾಗಿದ್ದಾಳೆ.

ಆದರೆ ಬೇಸರದ ವಿಚಾರ ಅಂದ್ರೆ ಆಕೆಗೆ ಸಹೋದ್ಯೋಗಿಗಳಲ್ಲಿ ಸ್ನೇಹಿತರನ್ನ ಕಾಣೋಕೆ ಸಾಧ್ಯವಾಗ್ತಿಲ್ಲ. ಏಕೆಂದರೆ ಆಕೆಗೆ ಸಮಾನ ವಯಸ್ಸಿನ ಯಾವೊಬ್ಬ ಸಹೋದ್ಯೋಗಿಗಳೂ ಸಿಕ್ಕಿಲ್ಲವಂತೆ. ತಾನು ಈ ಕೆಲಸವನ್ನ ತುಂಬಾನೇ ಪ್ರೀತಿಸುತ್ತಿದ್ದು ನಿವೃತ್ತಿ ಹೊಂದುವವರೆಗೂ ಕೆಲಸ ಮುಂದುವರಿಸುತ್ತೇನೆ ಎಂದು ಹೇಳಿದ್ದಾಳೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...