ನಿಮ್ಮ ಪ್ರೇಮದ ಆಳ ಎಷ್ಟು ಎಂದು ಅರಿಯಲು ಏನೆಲ್ಲಾ ಹುಚ್ಚಾಟಗಳನ್ನು ಆಡುವ ಆಲೋಚನೆ ನಿಮ್ಮ ಮನದಲ್ಲಿ ಬಂದಿರಬಹುದು? ಉಕ್ರೇನ್ನ ಜೋಡಿಯೊಂದು ತಮ್ಮ ಪ್ರೇಮದ ಆಳವನ್ನು ಪರೀಕ್ಷಿಸಲು ಅತಿರೇಕದ ಪರೀಕ್ಷೆಯೊಂದನ್ನು ಮಾಡಿದೆ.
ಪ್ರೇಮಿಗಳ ದಿನದಂದು ಅಲೆಕ್ಸಾಂಡರ್ ಹಾಗೂ ವಿಕ್ಟೋರಿಯಾ ಹೆಸರಿನ ಈ ಜೋಡಿ ಕ್ಯಿವ್ ನಗರದಲ್ಲಿರುವ ಯುನಿಟಿ ಪ್ರತಿಮೆ ಬಳಿ ತಮ್ಮ ಕೈಗಳನ್ನು ವೆಲ್ಡ್ ಮಾಡಿಕೊಳ್ಳಲು ನಿರ್ಧರಿಸಿದೆ. ಇಬ್ಬರ ಕೈಗಳೂ ಕೆಲವೇ ಸೆಂಮೀ ದೂರವಿದ್ದವು ಎಂದು ಈ ಪ್ರಯೋಗದ ಉಸ್ತುವಾರಿ ನೋಡಿಕೊಂಡ ಉಕ್ರೇನ್ನ ರಾಷ್ಟ್ರೀಯ ನೋಂದಣಿಯ ವಿಟಲೇ ಜೋರಿನ್ ತಿಳಿಸಿದ್ದಾರೆ.
ಜೋಡಿಯ ಕೈಗಳನ್ನು ಒಂದೆಡೆ ಸೇರಿಸುವ ಮುನ್ನ ಇಬ್ಬರ ಮಾನಸಿಕ ಆರೋಗ್ಯವನ್ನು ಜೋರಿನ್ ಪರೀಕ್ಷಿಸಿದ್ದಾರೆ.
‘ಸೌಂದರ್ಯ’ದ ಮೂಲಕವೇ ಫೇಮಸ್ ಆಗಿದ್ದಾಳೆ ಈ ಬಸ್ ಚಾಲಕಿ…!
ತಂತಮ್ಮ ಕೈಗಳನ್ನು ಹೀಗೆ ಬೇಡಿಗೆ ಹಾಕಿಕೊಂಡು ಬರೊಬ್ಬರಿ ಮೂರು ತಿಂಗಳು ಕಳೆದಿದೆ ಈ ಜೋಡಿ. ಇದೇ ವೇಳೆ ಟಾಯ್ಲೆಟ್ಗೆ ಹೋಗುವಾಗ ಗಂಡಸರ/ಹೆಂಗಸರ ಶೌಚಾಲಯವೋ ಎಂಬ ಪ್ರಶ್ನೆ ಬಂದಾಗ ಈ ಜೋಡಿ ಹೆಂಗಸರ ಶೌಚಾಲಯ ಆರಿಸಿಕೊಂಡಿದ್ದು, ಕ್ಲೀನರ್ಗಳನ್ನು ಬೆಚ್ಚಿ ಬೀಳಿಸಿದೆ.
ಹಾಗೇ ಸ್ನಾನ ಮಾಡುವಾಗ ಸಹ ತಂತಮ್ಮ ಸರದಿಗೆ ಕಾಯುತ್ತಾ ಇದ್ದು, ಬಟ್ಟೆ ಒಗೆಯುವಾಗಲೂ ಇಂಥದ್ದೇ ಹೆಜ್ಜೆಯನ್ನು ಈ ಜೋಡಿ ಅನುಸರಿಸಿದೆ.