alex Certify ಚಲಿಸುತ್ತಿದ್ದ ವಿಮಾನದಿಂದ ತುರ್ತು ದ್ವಾರ ತೆಗೆದು ಹೊರ ಬಂದ ಪ್ರಯಾಣಿಕರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಚಲಿಸುತ್ತಿದ್ದ ವಿಮಾನದಿಂದ ತುರ್ತು ದ್ವಾರ ತೆಗೆದು ಹೊರ ಬಂದ ಪ್ರಯಾಣಿಕರು

ರನ್‌ವೇನಿಂದ ಹೊರಬರುತ್ತಿದ್ದ ವಿಮಾನವೊಂದರಲ್ಲಿ ಇದ್ದ ಇಬ್ಬರು ಪ್ರಯಾಣಿಕರು ಹಾಗೂ ಶ್ವಾನವೊಂದು ತುರ್ತು ನಿರ್ಗಮನ ಪ್ರವೇಶದ ಮೂಲಕ ಆಚೆ ಬಂದ ಘಟನೆ ನ್ಯೂಯಾರ್ಕ್‌ನ ಲಾ ಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಘಟಿಸಿದೆ.

ಕ್ಯಾಬಿನ್ ದ್ವಾರವನ್ನು ತೆರೆದ ಈ ಪ್ರಯಾಣಿಕರು ತುರ್ತು ಸ್ಲೈಡ್ ‌ಅನ್ನು ಹಿಂದಕ್ಕೆ ಸರಿಸಿ ತಮ್ಮ ಸರ್ವೀಸ್ ಶ್ವಾನದೊಂದಿಗೆ ಹೀಗೆ ಹೊರಬಂದಿದ್ದಾರೆ. ಈ ಇಬ್ಬರು ಪ್ರಯಾಣಿಕರಲ್ಲಿ ಒಬ್ಬರಾದ ಆಂಟೋನಿಯೋ ಮರ್ಡೋಕ್ ತಮಗೆ ಟ್ರಾಮಾಟಿಕ್ ಸ್ಟ್ರೆಸ್ ಇರುವ ಕಾರಣ ವಿಮಾನದಿಂದ ಹೀಗೆ ತಕ್ಷಣವೇ ಹೊರಬರಬೇಕಾಯಿತು ಎಂದಿದ್ದಾರೆ. ಮರ್ಡೋಕ್ (31) ಹಾಗೂ ಆತನ ಸಂಗಾತಿ ಬ್ರಯಾನ್ನಾ ಗ್ರಕೋ (23) ಇಬ್ಬರನ್ನೂ ಘಟನೆ ಬಳಿಕ ಬಂಧಿಸಲಾಗಿದೆ.

ವಿಮಾನವು ಟೇಕಾಫ್ ಆಗಲು ರೆಡಿಯಾಗುತ್ತಿರುವಂತೆಯೇ ಸೀಟುಗಳ ಮೇಲೆ ಕುಳಿತುಕೊಳ್ಳದೇ ನಿಂತುಕೊಳ್ಳಲು ಮುಂದಾದ ಈ ಇಬ್ಬರಿಗೂ ಎಷ್ಟೇ ಮನವಿ ಮಾಡಿದರೂ ಸಹ ಅದಕ್ಕೆ ಕ್ಯಾರೇ ಅನ್ನಲಿಲ್ಲ. ಇದೇ ವೇಳೆ ಇಬ್ಬರೂ ಸಹ ತಂತಮ್ಮ ಸೀಟುಗಳನ್ನು ಅನೇಕ ಬಾರಿ ಬದಲಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...