alex Certify ಟ್ರಂಪ್​ ಲಸಿಕೆ ವಿತರಣೆ ಬಗ್ಗೆ ಯೋಜನೆಯನ್ನೇ ಮಾಡಿರಲಿಲ್ಲವೆಂದ ಬಿಡೆನ್​​ ಸರ್ಕಾರದ ಅಧಿಕಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಂಪ್​ ಲಸಿಕೆ ವಿತರಣೆ ಬಗ್ಗೆ ಯೋಜನೆಯನ್ನೇ ಮಾಡಿರಲಿಲ್ಲವೆಂದ ಬಿಡೆನ್​​ ಸರ್ಕಾರದ ಅಧಿಕಾರಿ

ಡೊನಾಲ್ಡ್​ ಟ್ರಂಪ್ ಕೊನೆಯ ಅಧಿಕಾರಾವಧಿಯಲ್ಲಿ ತಿಂಗಳಿನಲ್ಲಿ ಕೊರೊನಾ ವೈರಸ್ ಉಲ್ಬಣಗೊಂಡಿತ್ತು. ಆದರೆ ಡೊನಾಲ್ಡ್ ಟ್ರಂಪ್​​ ಕೊರೊನಾ ಲಸಿಕೆ ವಿತರಣೆಯ ಬಗ್ಗೆ ತಲೇನೇ ಕೆಡಿಸಿಕೊಂಡಿರಲಿಲ್ಲ ಎಂದು ಅಮೆರಿಕ ನೂತನ ಅಧ್ಯಕ್ಷ ಜೋ ಬಿಡೆನ್​ ಸಿಬ್ಬಂದಿ ಮುಖ್ಯಸ್ಥ ರಾನ್​ ಕ್ಲೈನ್​ ಹೇಳಿದ್ದಾರೆ .

ಅಮೆರಿಕದಲ್ಲಿ ಲಸಿಕೆಯನ್ನ ವಿತರಿಸುವ ಪ್ರಕ್ರಿಯೆ ಅದರಲ್ಲೂ ವಿಶೇಷವಾಗಿ ನರ್ಸಿಂಗ್​ ಹೋಂ ಹಾಗೂ ಆಸ್ಪತ್ರೆಗಳ ಕೊರೊನಾ ಲಸಿಕೆಗಳನ್ನ ವಿತರಣೆ ಮಾಡುವ ಯೋಜನೆ ನಾವು ಶ್ವೇತಭವನಕ್ಕೆ ಬರುವವರೆಗೂ ಅಮೆರಿಕದಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ರಾನ್​ ಹೇಳಿದ್ದಾರೆ.

ಅಮೆರಿಕದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಜೋ ಬಿಡೆನ್​, ಟ್ರಂಪ್​ ಆಡಳಿತದ ಅವಧಿಯಲ್ಲಿ ಅಮೆರಿಕದಲ್ಲಿ 4 ಲಕ್ಷಕ್ಕೂ ಹೆಚ್ಚು ಮಂದಿಯನ್ನ ಬಲಿ ಪಡೆದ ಕೊರೊನಾ ವಿರುದ್ಧ ತೀವ್ರ ಹೋರಾಟ ನಡೆಸುವ ಭರವಸೆ ನೀಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...