ಪೆಟ್ರೋಲ್ ಹಾಗೂ ಡೀಸೆಲ್ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರೋದ್ರಿಂದ ಜನತೆ ಎಲೆಕ್ಟ್ರಿಕ್ ವಾಹನಗಳತ್ತ ಮುಖ ಮಾಡ್ತಿದ್ದಾರೆ. ಹೀಗಾಗಿ ಕಾರು ತಯಾರಕ ಕಂಪನಿಗಳೂ ಸಹ ಗ್ರಾಹಕರ ಬೇಡಿಕೆಯಂತೆಯೇ ಎಲೆಕ್ಟ್ರಿಕ್ ಕಾರುಗಳನ್ನ ಹೆಚ್ಚೆಚ್ಚು ಉತ್ಪಾದನೆ ಮಾಡುತ್ತಿವೆ.
ಇದೇ ಎಲೆಕ್ಟ್ರಿಕ್ ಕಾರುಗಳ ಸಾಲಿಗೆ ಟೊಯೋಟೋದ C+pod ಕೂಡ ಸೇರಿದೆ. ಈ ಕಾರಿನ ಪ್ರಮುಖ ವಿಶೇಷತೆ ಅಂದ್ರೆ ಇದರ ಕಾರ್ಯಕ್ಷಮತೆ. ಈ ಕಾರು ಒಂದು ಬಾರಿ ಚಾರ್ಜ್ ಮಾಡಿದ್ರೆ 150 ಕಿಲೋಮೀಟರ್ವರೆಗೆ ಪ್ರಯಾಣ ಮಾಡಲಿದೆ.
ಈ ಕಾರನ್ನ ಜಪಾನ್ನಲ್ಲಿ ಎರಡು ವೇರಿಯಂಟ್ ಎಕ್ಸ್ ಹಾಗೂ ಜಿನಲ್ಲಿ ಲಾಂಚ್ ಮಾಡಲಾಗಿದೆ. ಇದರ ಬೆಲೆ ಕ್ರಮವಾಗಿ 11.73 ಲಕ್ಷ ರೂಪಾಯಿ ಹಾಗೂ 12.2 ಲಕ್ಷ ರೂಪಾಯಿ ಇದೆ. ಈ ಕಾರಿನಲ್ಲಿ ಅಳವಡಿಸಲಾದ ಎಲೆಕ್ಟ್ರಿಕ್ ಮೋಟಾರ್ 9.2 ಕಿಲೋವ್ಯಾಟ್ ಸಾಮರ್ಥ್ಯ ಹೊಂದಿದೆ. ವಾಹನದ ತೂಕ 690 ಕಿಲೋ ಗ್ರಾಂ ಇದೆ.
ಒಂದು ಬಾರಿ ಮೋಟಾರ್ ಚಾರ್ಜ್ ಆಗಲು 5 – 16 ಗಂಟೆ ಸಮಯ ತೆಗೆದುಕೊಳ್ಳುತ್ತೆ. ಈ ಕಾರು ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಸಂಚರಿಸುತ್ತೆ ಎಂದು ಕಂಪನಿ ಹೇಳಿದೆ. ಈ ಕಾರಿನ ಸೈಜ್ ಸಣ್ಣದಿದ್ದು ಇಬ್ಬರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಈ ಕಾರನ್ನ ನಗರ ಪ್ರದೇಶದಲ್ಲಿ ಸಂಚಾರ ಮಾಡುವ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ.