alex Certify ಬೀದಿಯಲ್ಲಿ ಅಡ್ಡಾಡುತ್ತಿದ್ದ ಕಾಂಗರೂ ಅರೆಸ್ಟ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೀದಿಯಲ್ಲಿ ಅಡ್ಡಾಡುತ್ತಿದ್ದ ಕಾಂಗರೂ ಅರೆಸ್ಟ್….!

Touristy Kangaroo Put Behind Bars After Cops Catch Him Hopping ...

ಫ್ಲಾರಿಡಾದ ಬೀದಿಗಳಲ್ಲಿ ಮನಸೋಯಿಚ್ಛೆ ಅಡ್ಡಾಡುತ್ತಿದ್ದ ಕಾಂಗರೂ ಒಂದನ್ನು ಅಲ್ಲಿನ ಪೊಲೀಸರು ಗುರುವಾರ ಬೆಳಿಗ್ಗೆ ಸೆರೆ ಹಿಡಿದಿದ್ದಾರೆ.

ಕಾಂಗರೂ ಒಂದು ಮನಸೋಯಿಚ್ಛೆ ಅಡ್ಡಾಡುತ್ತಿದೆ ಎಂದು ಇಲ್ಲಿನ ಲಾಡರ್‌ಡೇಲ್ ನಿವಾಸಿಗಳು ಪೊಲೀಸರಿಗೆ ದೂರು ನೀಡಿದ ಬೆನ್ನಿಗೇ ಕಾರ್ಯಪ್ರವೃತ್ತರಾದ ಆರಕ್ಷಕರು ಈ ಪುಂಡ ಕಾಂಗರೂವನ್ನು ತಮ್ಮ ಸ್ಕ್ವಾಡ್‌ ಕಾರ್‌ನಲ್ಲಿ ಎತ್ತಾಕಿಕೊಂಡು ಹೋಗಿದ್ದಾರೆ. ಕಾಂಗರೂ ಈಗ ಪೊಲೀಸರ ಕುದುರೆಗಳು ಇರುವ ಜಾಗದಲ್ಲಿ ಇದೆ.

ಈ ಕಾಂಗರೂ ಸಾಕಿದ್ದ ಆಂಟೋನಿ ಮಕಿಯಾಸ್ ಎಂಬಾತ ತನ್ನ ಪ್ರೀತಿಯ ಸಾಕು ಪ್ರಾಣಿಯನ್ನು ಅಲ್ಲಿಂದ ಮರಳಿ ತರಲು ಯತ್ನಿಸುತ್ತಿದ್ದಾರೆ. ಲಾಡರ್‌ಡೇಲ್ ಪ್ರದೇಶದಲ್ಲಿ ಕಾಂಗರೂ ಸಾಕಲು ಅವಕಾಶ ಇಲ್ಲದ ಕಾರಣ, ಕಾಂಗರೂವನ್ನು ಅದರ ಮಾಲೀಕರಿಗೆ ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...