alex Certify ಕೆನಡಾದಲ್ಲಿ ರಾರಾಜಿಸಿದ ಪ್ರಧಾನಿ ಮೋದಿ ಕಟೌಟ್: ಕಾರಣ ಇಲ್ಲಿದೆ ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆನಡಾದಲ್ಲಿ ರಾರಾಜಿಸಿದ ಪ್ರಧಾನಿ ಮೋದಿ ಕಟೌಟ್: ಕಾರಣ ಇಲ್ಲಿದೆ ನೋಡಿ

 

ಕೊರೊನಾ ವೈರಸ್​ ಸಂಕಷ್ಟದ ಈ ಸಮಯದಲ್ಲಿ ಭಾರತ ವಿಶ್ವದ ಅನೇಕ ರಾಷ್ಟ್ರಗಳಿಗೆ ಉಡುಗೊರೆಯ ರೂಪದಲ್ಲಿ ಲಸಿಕೆಗಳನ್ನ ನೀಡುವ ಮೂಲಕ ಸಹಾಯ ಹಸ್ತ ಚಾಚಿದೆ. ಹೀಗಾಗಿ ವಿಶ್ವಾದ್ಯಂತ ಭಾರತದ ಈ ಗುಣಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗ್ತಿದೆ.

ಭಾರತ ಸೀರಮ್​ ಇನ್​​ಸ್ಟಿಟ್ಯೂಟ್​ ಆಫ್​ ಇಂಡಿಯಾ ಕಂಪನಿಯ ಕೋವಿಶೀಲ್ಡ್ ಲಸಿಕೆಯ 5 ಲಕ್ಷ ಡೋಸ್​ಗಳನ್ನ ಕೆನಡಾಗೆ ಕಳುಹಿಸಿಕೊಟ್ಟಿದೆ. ಭಾರತದ ಈ ಸಹಾಯಕ್ಕೆ ಕೆನಡಾ ಹೃದಯಪೂರ್ವಕ ಧನ್ಯವಾದವನ್ನ ಅರ್ಪಿಸಿದೆ. ಭಾರತಕ್ಕೆ ವಿಶೇಷ ರೂಪದಲ್ಲಿ ಧನ್ಯವಾದ ಅರ್ಪಿಸಿರುವ ಕೆನಡಾದ ಗ್ರೇಟರ್​ ಟೊರೆಂಟೋದಲ್ಲಿ ಪ್ರಧಾನಿ ಮೋದಿಯ ಕಟೌಟ್​ನ್ನು ಅಳವಡಿಸಲಾಗಿದೆ. ಈ ಕಟೌಟ್​ನಲ್ಲಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಲಾಗಿದೆ.

ಪ್ರಧಾನಿ ಇಮ್ರಾನ್ ಹೇಳಿಕೆಗೆ ಮ್ಯೂಸಿಕಲ್ ಟಚ್‌ ಕೊಟ್ಟ ಪಾಕ್ ಗಾಯಕ

ಕೆನಡಾದ ಟೊರೊಂಟೋದಲ್ಲಿ ಅಳವಡಿಸಲಾಗಿರುವ ಈ ಬಿಲ್​ ಬೋರ್ಡ್​ನಲ್ಲಿ – ಕೆನಡಾಗೆ ಲಸಿಕೆಗಳನ್ನ ಕಳುಹಿಸಿಕೊಟ್ಟಿದ್ದಕ್ಕೆ ಭಾರತ ಹಾಗೂ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದಗಳು. ಕೆನಡಾ ಹಾಗೂ ಭಾರತದ ಈ ಸ್ನೇಹ ಸಂಬಂಧ ಇದೇ ರೀತಿ ಮುಂದುವರಿಯಲಿ ಎಂದು ಬರೆಯಲಾಗಿದೆ. ‘

ಭಾರತ ಇನ್ನೇನು ಕೆಲವೇ ದಿನಗಳಲ್ಲಿ ಕೆನಡಾಗೆ 20 ಲಕ್ಷ ಡೋಸ್​​ ಲಸಿಕೆಗಳನ್ನ ಕಳುಹಿಸಿಕೊಡಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...