alex Certify OMG…! ಕೊರೊನಾ ಕಾರಣಕ್ಕೆ ಕಾರಿನಲ್ಲೇ ನಡೆದಿದೆ ಮದುವೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

OMG…! ಕೊರೊನಾ ಕಾರಣಕ್ಕೆ ಕಾರಿನಲ್ಲೇ ನಡೆದಿದೆ ಮದುವೆ…!

ಕೊರೋನಾ ಸಾಂಕ್ರಾಮಿಕ ರೋಗ ಹರಡುತ್ತಿರುವ ಸಂದರ್ಭದಲ್ಲಿ ಮದುವೆ ಸಮಾರಂಭಗಳು ಮಂಕಾಗಿವೆ. ನೂರಾರು, ಸಾವಿರಾರು ಜನರ ಸಮ್ಮುಖದಲ್ಲಿ ನಡೆಯುತ್ತಿದ್ದ ಮದುವೆಗಳು ಈಗ ಕುಟುಂಬದ ಹತ್ತು ಮಂದಿಗೆ ಸೀಮಿತಗೊಂಡಂತೆ ಮುಗಿದುಹೋಗುತ್ತಿದೆ.

ಬ್ರೆಜಿಲ್ ನಲ್ಲಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಡ್ರೈವ್ ಥ್ರೂ ಮದುವೆಗಳು ಆರಂಭವಾಗಿವೆ. ಕೊರೋನಾ ವೈರಸ್ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ವಧು-ವರರು ತಾವಿರುವ ವಾಹನದಲ್ಲೇ ರಿಂಗ್ ಬದಲಾಯಿಸಿ, ವಿವಾಹವನ್ನು ಮಾಡಿಕೊಳ್ಳುತ್ತಿದ್ದಾರೆ.

ಕಳೆದ ಗುರುವಾರ 15 ಜೋಡಿ ಡ್ರೈವ್ ಥ್ರೂ ಮೂಲಕವೇ ವಿವಾಹವಾದರು ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ.

ಕಾರಿನ ಹೊರಭಾಗದಲ್ಲಿ ನೋಟರಿ ಅವರು ವಿವಾಹ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ವಧು – ವರರು ಕಾರಿನೊಳಗೇ ಇದ್ದು ಶಾಸ್ತ್ರ ಮುಗಿಸಿದರು.

ಇದೇ ವೇಳೆ ಬ್ರೆಜಿಲ್ ನಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮದುವೆಗೆ ಅವಕಾಶ ನೀಡುವ ನಿಯಮಗಳನ್ನು ಜಾರಿಗೆ ತರಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...