alex Certify ಟಿನ್ನಡ್ ಆಹಾರ ನೋಡಿ ಬೆಚ್ಚಿಬಿದ್ದ ಗ್ರಾಹಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟಿನ್ನಡ್ ಆಹಾರ ನೋಡಿ ಬೆಚ್ಚಿಬಿದ್ದ ಗ್ರಾಹಕ

ಕರೋನಾ ವೈರಸ್ ಹಿನ್ನೆಲೆಯಲ್ಲಿ ಏನನ್ನು ಮುಟ್ಟಲು ಭಯ ಪಡುವ ಸ್ಥಿತಿಯಲ್ಲಿ ಜನ ಇದ್ದಾರೆ. ಹೀಗಾಗಿ ಜನ ಹೊರಬರಲು ಹೆದರುತ್ತಿದ್ದಾರೆ. ಅದಕ್ಕೋಸ್ಕರ ಟಿನ್ನಡ್ ಆಹಾರಗಳನ್ನು ಶೇಖರಿಸಿಕೊಂಡು ಇಟ್ಟುಕೊಳ್ಳುತ್ತಿದ್ದಾರೆ. ಕಾರಣ ಅದು ಬಹು ಬೇಗ ಕೆಡುವುದಿಲ್ಲ. ಆದರೆ ಇಲ್ಲೊಬ್ಬರಿಗೆ ಟಿನ್ನಡ್ ನ್ಯೂಡಲ್ ಬಾಕ್ಸ್ ಅನ್ನು ತೆಗೆದು ನೋಡಿದಾಗ ಕಂಡಿದ್ದೇನು ಗೊತ್ತಾ?

ಡೈನೋಸಾರ್ ಡ್ರಾಕುಲಾ ಎಂಬ ಟ್ವಿಟ್ಟರ್ ಬಳಕೆದಾರ ತಾನು ಅನುಭವಿಸಿದ ಟಿನ್ನಡ್ ಫುಡ್ ಡಬ್ಬಿಯ ಕಥೆ ಬಗ್ಗೆ ಹಂಚಿಕೊಂಡಿದ್ದಾನೆ. ಜೊತೆಗೆ ಇದು ತಮಗಾದ ಕೆಟ್ಟ ಅನುಭವ ಎಂದು ಹೇಳಿಕೊಂಡಿದ್ದಾನೆ.

ನೂಡಲ್ಸ್ ಡಬ್ಬಿಯನ್ನು ಬಹಳ ಕಷ್ಟಪಟ್ಟು ಓಪನ್ ಮಾಡಿದ್ದಾನೆ. ಆದರೆ ಅದು ತುಕ್ಕು ಹಿಡಿದಿತ್ತು . ಅಲ್ಲದೆ ಒಳಗಡೆ ಒಂದು ರೀತಿಯ ಗ್ಯಾಸ್ ಉತ್ಪತ್ತಿ ಆಯಿತು, ಹೊಗೆ ಕಾಣಿಸಿಕೊಂಡಿತು. ಇದನ್ನು ನೋಡಿ ಹೌಹಾರಿ ವಾಪಸ್ ಮುಚ್ಚಿ ಬಿಟ್ಟಿದ್ದಾಗಿ ಆತ ಹೇಳಿಕೊಂಡಿದ್ದಾನೆ. ಈ ಸುದ್ದಿ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ಸಾರ್ವಜನಿಕರಿಂದ ಭಾರಿ ಟೀಕೆ ವ್ಯಕ್ತವಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...