alex Certify ನಿರ್ಜನವಾಗಿದ್ದ ತೋಟದ ಮನೆಯಲ್ಲಿ 50 ವರ್ಷದ ಹಿಂದಿನ ಆಟಿಕೆ ಪತ್ತೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿರ್ಜನವಾಗಿದ್ದ ತೋಟದ ಮನೆಯಲ್ಲಿ 50 ವರ್ಷದ ಹಿಂದಿನ ಆಟಿಕೆ ಪತ್ತೆ

1950ರ ಕಾಲದಲ್ಲಿ ಬೀಗ ಹಾಕಿದ್ದ ನಿರ್ಜನ ತೋಟದ ಮನೆಯೊಂದನ್ನ ಬ್ರಿಟನ್​ನ ಫ್ಲೀಟ್​ವುಡ್​ನಲ್ಲಿ ಮರುಶೋಧಿಸಲಾಗಿದೆ.

ತಾತಿ ಮೇರಿ ಕೋವಲ್​ ನಿಧನದ ಬಳಿಕ ಆಸ್ತಿಗಾಗಿ ಇಬ್ಬರು ಸಹೋದರರ ನಡುವೆ ಉಂಟಾದ ಕಲಹ ಹಾಗೂ ಸಂಬಂಧಿಕರಿಗೂ ಈ ಆಸ್ತಿಯ ಮೇಲೆ ಹಕ್ಕಿಲ್ಲದಿದ್ದ ಕಾರಣ ತೋಟದ ಮನೆ ಇಷ್ಟು ದಶಕಗಳಿಂದ ನಿರ್ಜನವಾಗಿತ್ತು ಎಂದು ಹೇಳಲಾಗ್ತಿದೆ.

1880ರಲ್ಲಿ ವಾಸ್ತುಶಿಲ್ಪಿ ಥಾಮಸ್​ ಥಾರ್ನ್ಟನ್​​ ಎಂಬವರು ಈ ತೋಟದ ಮನೆಯನ್ನು ನಿರ್ಮಿಸಿದ್ದರು. ಲಂಕಾಷೈರ್​​ನ ಫ್ಲೀಟ್​ವುಡ್​ ಹೊರವಲಯದಲ್ಲಿ ಈ ತೋಟದ ಮನೆಯಿದೆ. ಒಡಹುಟ್ಟಿದವರ ಆಸ್ತಿ ಕಲಹದಿಂದ ತೋಟದ ಮನೆ ನಿರ್ಜನವಾಗಿದೆ ಅಂತಾ ದಿ ಸನ್​ ವರದಿ ಮಾಡಿದೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ನಿರ್ಜನ ತೋಟದ ಮನೆಯ ಫೋಟೋಗಳು ಹರಿದಾಡುತ್ತಿವೆ. ಇದರಲ್ಲಿ ಮುರಿದು ಬಿದ್ದ ಮಕ್ಕಳ ಆಟಿಕೆಗಳು, ರತ್ನ ಗಂಬಳಿ, 1953ರ ಕಾಲದ ಪತ್ರಿಕೆಗಳನ್ನ ಕಾಣಬಹುದಾಗಿದೆ. ದಶಕಗಳಿಂದ ಈ ಮನೆಯ ಹತ್ತಿರ ಯಾರೂ ಸುಳಿಯದ ಕಾರಣ ಉದ್ಯಾನವನ ಕಾಡಿನ ರೀತಿಯಲ್ಲಿ ಬೆಳೆದುಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...