alex Certify ಹುಲಿ ಸೊಂಟಕ್ಕೆ ಸರ್ಜರಿ ಮಾಡಿದ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಲಿ ಸೊಂಟಕ್ಕೆ ಸರ್ಜರಿ ಮಾಡಿದ ವೈದ್ಯರು

ಆರ್ಥರೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಹತ್ತು ವರ್ಷದ ಹುಲಿಯೊಂದಕ್ಕೆ ಸೊಂಟದ ರಿಪ್ಲೇಸ್‌ಮೆಂಟ್ ಸರ್ಜರಿಯನ್ನು ಯಶಸ್ವಿಯಾಗಿ ಮಾಡಿದ ಘಟನೆ ಷಿಕಾಗೋ ಮೃಗಾಲಯದಲ್ಲಿ ನಡೆದಿದೆ. ಈ ಸರ್ಜರಿಯಿಂದ ಹುಲಿಯ ಆಯುಷ್ಯ ಇನ್ನಷ್ಟು ಹೆಚ್ಚಾಗಲಿದೆ ಎಂದು ವೈದ್ಯರ ತಂಡ ವಿಶ್ವಾಸದಿಂದ ನುಡಿದಿದೆ.

ಮಲೇನಾ ಹೆಸರಿನ ಈ ಹೆಣ್ಣು ಹುಲಿ ಕಳೆದ ವರ್ಷ ಈ ಮೃಗಾಲಯಕ್ಕೆ ಬಂದಾಗಲೇ ಆಕೆಗೆ ಆರ್ಥರೈಟಿಸ್ ಸಮಸ್ಯೆ ಇದೆ ಎಂದು ಸ್ಕ್ಯಾನಿಂಗ್‌ನಿಂದ ತಿಳಿದು ಬಂದಿತ್ತು. ವಿಪರೀತ ನೋವಿನ ಕಾರಣ ಹುಲಿಗೆ ಪೇನ್ ಕಿಲ್ಲರ್‌ಗಳನ್ನು ನೀಡಲಾಗುತ್ತಿತ್ತು.

ವ್ಯಕ್ತಿಯನ್ನ ಕರಡಿ ಬೆನ್ನಟ್ಟಿದ ಪರಿ ಕಂಡು ನೆಟ್ಟಿಗರು ಶಾಕ್​..!

ಮಿಸ್ಸೌರಿ ವಿವಿಯ ಆರ್ಥೋಪೆಡಿಕ್ ಸರ್ಜನ್ ಡಾ. ಜೇಮ್ಸ್‌ ಕುಕ್ ಸರ್ಜರಿ ತಂಡವನ್ನು ಮುನ್ನಡೆಸಿದ್ದು, 6.5 ಗಂಟೆಗಳ ಕಾಲ ಬಹಳ ನಾಜೂಕಾಗಿ ಈ ಶಸ್ತ್ರಚಿಕಿತ್ಸೆ ಮಾಡಿ ಮುಗಿಸಿದ್ದಾರೆ. ಒಮ್ಮೆ ಚೇತರಿಸಿಕೊಳ್ಳುತ್ತಲೇ ಹುಲಿ ಸಂಪೂರ್ಣವಾಗಿ ನಡೆಯಲು ಸಫಲವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...