alex Certify ಪಕ್ಷಿಗೆ ವೈನ್‌ ಕುಡಿಸಿದ‌ ಮೂವರು ಅಂದರ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಕ್ಷಿಗೆ ವೈನ್‌ ಕುಡಿಸಿದ‌ ಮೂವರು ಅಂದರ್….!

ಖಾಸಗಿ ಮೃಗಾಲಯದಿಂದ ಟರ್ಕಿ ಪಕ್ಷಿಯನ್ನ ಕದ್ದು ಅದಕ್ಕೆ ವಿಚಿತ್ರ ಹಿಂಸೆ ನೀಡಿದ ಮೂವರನ್ನ ಯುರೋಪ್​​ನ ಲಾಟ್ವಿಯಾದ ಪೊಲೀಸರು ಬಂಧಿಸಿದ್ದಾರೆ.

ಲಾಟ್ವಿಯಾದ ರಾಜಧಾನಿ ರಿಗಾದಲ್ಲಿ ಬುಧವಾರ ಖಾಸಗಿ ಮೃಗಾಲಯಕ್ಕೆ ಎಂಟ್ರಿ ಕೊಟ್ಟ ಮೂವರು ಕಪ್ಪು ಚೀಲದಲ್ಲಿ ಟರ್ಕಿಯನ್ನ ತುಂಬಿಕೊಂಡು ಪರಾರಿಯಾಗಿದ್ದರು. ಈ ದೃಶ್ಯ ಖಾಸಗಿ ಝೂನ ಭದ್ರತಾ ಕ್ಯಾಮರಾದಲ್ಲಿ ಸೆರೆಯಾಗಿತ್ತು.

30 ರಿಂದ 40 ವರ್ಷದವರಾದ ಮೂವರು ಕದ್ದ ಪಕ್ಷಿಯನ್ನ ಜುರ್ಮಲಾದ ಕಡಲತೀರದಲ್ಲಿದ್ದ ರೆಸಾರ್ಟ್​ಗೆ ಕರೆದೊಯ್ದಿದ್ದರು. ಈ ಮೂವರಲ್ಲಿ ಓರ್ವನ ಬರ್ತಡೇ ಸೆಲೆಬ್ರೇಟ್​ ಮಾಡಿದ ಮೂವರು ವೈನ್​ ಕುಡಿದು ಬಳಿಕ ಟರ್ಕಿಗೆ ಒತ್ತಾಯಪೂರ್ವಕವಾಗಿ ವೈನ್​ ಕುಡಿಸಿ ಚಿತ್ರಹಿಂಸೆ ನೀಡಿದ್ದಾರೆ.

ಈ ವಿಚಾರ ಬೆಳಕಿಗೆ ಬರ್ತಿದ್ದಂತೆ ಅಲರ್ಟ್​ ಆದ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ. ಹಾಗೂ ಟರ್ಕಿ ಪಕ್ಷಿ ತನ್ನ ಮೃಗಾಲಯಕ್ಕೆ ವಾಪಸ್ಸಾಗಿದೆ. ಆರೋಪಿಗಳ ವಿರುದ್ಧ ಗೂಂಡಾಗಿರಿ ಸೇರಿದಂತೆ ಇನ್ನಿತರ ಪ್ರಕರಣ ಹಾಗೂ ದಂಡ ವಿಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...