ಯುವತಿಯೊಬ್ಬಳು ತನ್ನ ದೇಹದ ಅಂಗದ ವಿಚಿತ್ರ ಲಕ್ಷಣವೊಂದನ್ನ ಸಾಮಾಜಿಕ ಜಾಲತಾಣದ ವೇದಿಕೆಯಲ್ಲಿ ಹಂಚಿಕೊಂಡಿದ್ದಾಳೆ. ಯುವತಿಯ ಮೂಗನ್ನ ಒತ್ತಿದರೆ ಅದು ಎಲಾಸ್ಟಿಕ್ನಂತೆ ಮತ್ತೆ ತನ್ನ ಸಾಮಾನ್ಯ ಸ್ಥಿತಿಗೆ ಮರಳಿದೆ.
ನನ್ನ ಮೂಗಿನಲ್ಲಿ ಯಾವುದೇ ವಿಶೇಷ ಕಾರ್ಟಿಲೇಜ್ ಇಲ್ಲ. ನನ್ನ ಮೂಗು ವಿಚಿತ್ರವಾಗಿದೆ. ನನ್ನ ಮೂಗನ್ನ ನೀವು ಒತ್ತಿದ್ರೆ ಎಲಾಸ್ಟಿಕ್ನಂತೆ ಹಿಂದಕ್ಕೆ ಹೋಗುತ್ತೆ. ಮತ್ತು ಸಹಜ ಸ್ಥಿತಿಗೆ ಮರಳುತ್ತೆ. ಹಾಗಂತ ನನ್ನ ಮೂಗನ್ನ ಮುರಿಯೋಕೆ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಫಾಸ್ಟ್ ಫುಡ್ ಸಿಬ್ಬಂದಿ ಮೇಲೆ ದಾಳಿ ನಡೆಸಿ ಹಣ ದೋಚಿದ ಯುವತಿಯರು..!
ಎಲ್ಲಾರ ಈ ವಿಚಿತ್ರ ಮೂಗನ್ನ ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ. ಕಮೆಂಟ್ನಲ್ಲಿ ನೆಟ್ಟಿಗರೊಬ್ಬರು ನೀವು ಬಾಕ್ಸಿಂಗ್ ಪಂದ್ಯಕ್ಕೆ ಸೇರಬಹುದು ಎಂದು ಸಲಹೆ ನೀಡಿದ್ದಾರೆ. ಕಮೆಂಟ್ನಲ್ಲಿ ಮೂಗಿನ ಬಗ್ಗೆ ಸಾಕಷ್ಟು ಕಮೆಂಟ್ಗಳನ್ನ ಕಂಡ ಎಲ್ಲಾ ಮತ್ತೊಂದು ವಿಡಿಯೋ ಮಾಡಿ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ಮೂಗಿನಲ್ಲಿ ಯಾವುದೇ ಕಾರ್ಟಿಲೇಜ್ ಇಲ್ಲ. ಇದು ಎಲಾಸ್ಟಿಕ್ ಮಾದರಿಯಲ್ಲಿದೆ. ಇದು ಯಾಕೆ ಹೀಗೆ ಅನ್ನೋದು ನನಗೆ ತಿಳಿದಿಲ್ಲ ಎಂದು ಹೇಳಿದ್ದಾರೆ.