alex Certify ʼಕೊರೊನಾʼ ಕಾಲದಲ್ಲೂ ಮದುವೆ ಸಮಾರಂಭವನ್ನು ಸ್ಮರಣೀಯವನ್ನಾಗಿಸಿಕೊಂಡ ಜೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಕಾಲದಲ್ಲೂ ಮದುವೆ ಸಮಾರಂಭವನ್ನು ಸ್ಮರಣೀಯವನ್ನಾಗಿಸಿಕೊಂಡ ಜೋಡಿ

ಕೊರೊನಾ ವೈರಸ್ ಕಾಟದಿಂದಾಗಿ 2020 ರಲ್ಲಿ ಮದುವೆ ಆಗಬೇಕಿದ್ದವು, ಶುಭ ಸಮಾರಂಭಗಳನ್ನು ಇಟ್ಟುಕೊಂಡವರೆಲ್ಲಾ ಹತ್ತಿರದ ಸಂಬಂಧಿಕರನ್ನೂ ಆಹ್ವಾನಿಸಲು ಸಾಧ್ಯವಾಗದೇ ನಿರಾಸೆ ಅನುಭವಿಸುವಂತಾಗಿದೆ.

ಆದರೆ ಕೆಲ ಜನರು ಈ ಸಂದರ್ಭದಲ್ಲೂ ಸಹ ಬಹಳ ಕ್ರಿಯೇಟಿವ್‌ ಐಡಿಯಾಗಳನ್ನು ಉಪಯೋಗಿಸಿ ಈ ಸುಸಂದರ್ಭಗಳನ್ನು ಸ್ಪೆಷಲ್ ಮಾಡಿಕೊಂಡಿದ್ದಾರೆ. ಬ್ರಿಟನ್‌ನ ರೊಮಾನೀ ಹಾಗೂ ಸ್ಯಾಮ್‌ ರಾಂಡೂ-ಸ್ಮಿತ್‌ ದಂಪತಿ ಜುಲೈನಲ್ಲಿ ಮದುವೆ ಮಾಡಿಕೊಳ್ಳಬೇಕಿತ್ತು. ಆದರೆ ಕೋವಿಡ್-19 ನಿರ್ಬಂಧಗಳು ಇದ್ದ ಕಾರಣದಿಂದ ಈ ಸಮಾರಂಭವನ್ನು ಆಗಸ್ಟ್‌ 14ಕ್ಕೆ ಮುಂದೂಡಬೇಕಾಗಿ ಬಂದಿತ್ತು. ಸಮಾರಂಭದಲ್ಲಿ ಕೇವಲ 14 ಮಂದಿಗೆ ಭಾಗಿಯಾಗಲು ಮಾತ್ರವೇ ಅವಕಾಶ ನೀಡಲಾಗಿತ್ತು.

ಆದರೆ ತಮ್ಮ ಪ್ರೀತಿಪಾತ್ರರನ್ನು ಬಿಟ್ಟು ಮದುವೆ ಮಾಡಿಕೊಳ್ಳಲು ಈ ಜೋಡಿ ಸಿದ್ಧವಿರಲಿಲ್ಲ. ಇದಕ್ಕೊಂದು ಕ್ರಿಯೇಟಿವ್ ಐಡಿಯಾ ಮಾಡಿಕೊಂಡ ಈ ಜೋಡಿ, 48 ಅತಿಥಿಗಳ ಕಾರ್ಡ್‌‌ ಬೋರ್ಡ್ ಕಟೌಟ್‌ಗಳನ್ನು ಮಾಡಿಸಿ ಮದುವೆ ಆಗುತ್ತಿದ್ದ ಜಾಗದಲ್ಲಿ ಇರಿಸಿದ್ದಾರೆ. ಈ ವಿಶೇಷ ಸಮಾರಂಭದ ಚಿತ್ರವನ್ನು ‘Hawaiian Shirt Photography’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

Some weddings we go to the guests can be a bit static but these guys really took it to a new level! Throw in #facemasks…

Posted by Hawaiian Shirt Photography on Wednesday, August 26, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...