ಹುಡುಗಿಯರು ಎಷ್ಟೇ ದೊಡ್ಡವರಾದರೂ ಸಹ ಅವರಿಗೆ ಟೆಡ್ಡಿ ಬಿಯರ್ಗಳ ಮೇಲಿನ ಪ್ರೀತಿ ಕಡಿಮೆಯಾಗೋದಿಲ್ಲ. ಹಾಳಾದ ಗೊಂಬೆಗಳನ್ನ ಬಿಸಾಡೋಕೂ ಮನಸ್ಸಾಗದೇ ಅದನ್ನ ಇಟ್ಟುಕೊಳ್ಳೋಕೂ ಆಗದೇ ಕಷ್ಟ ಅನುಭವಿಸ್ತಾ ಇರೋರು ಹುಡುಕಿದ್ರೆ ಅನೇಕರು ಸಿಗ್ತಾರೆ.
ಆದರೆ ಟೋಕಿಯೋದಲ್ಲಿ ಮನುಷ್ಯರಂತೆ ಗೊಂಬೆಗಳಿಗೂ ಆಸ್ಪತ್ರೆ ತೆರೆಯಲಾಗಿದೆ ನತ್ಸುಮಿ ಹೆಸರಿನ ಕ್ಲಿನಿಕ್ ಗೊಂಬೆಗಳಿಗೆ ಟ್ರೀಟ್ಮೆಂಟ್ ಕೊಡುತ್ತದೆಯಂತೆ. ಇಲ್ಲಿ ಗೊಂಬೆಗಳಿಗೆ ಕಣ್ಣಿನ ಚಿಕಿತ್ಸೆ, ಕೂದಲು ಕಸಿ ಸೇರಿದಂತೆ ಅನೇಕ ಬಗೆಯ ಚಿಕಿತ್ಸೆ ಕೊಡಲಾಗುತ್ತೆ.
ಈ ಕ್ಲಿನಿಕ್ನಲ್ಲಿ ತನ್ನ ಹಾಳಾದ ಗೊಂಬೆಯನ್ನ ಸರಿ ಮಾಡಿಸುವವರಲ್ಲಿ ಒಬ್ಬರಾದ 24 ವರ್ಷದ ಯು ಕಾಟೋ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ನನ್ನ ಗೊಂಬೆಯೊಂದು ಎಷ್ಟರ ಮಟ್ಟಿಗೆ ಹಳೆಯದಾಗಿತ್ತು ಅಂದರೆ ಅದನ್ನ ಬಿಸಾಡುವ ಬದಲು ಬೇರೆ ದಾರಿಯೇ ಇಲ್ಲ ಎಂದುಕೊಂಡಿದ್ದೆ. ಆದರೆ ಈ ವೇಳೆ ನಾನು ಈ ಗೊಂಬೆ ಕ್ಲಿನಿಕ್ ಬಗ್ಗೆ ಕೇಳಲ್ಪಟ್ಟೆ. ಹೀಗಾಗಿ ನತ್ಸುಮಿ ಆಸ್ಪತ್ರೆಗೆ ಭೇಟಿ ನೀಡಿದೆ. ನನ್ನ ಗೊಂಬೆ ಈಗ ಹೊಸದಾಗಿದೆ ಅಂತಾ ಸಂತಸ ವ್ಯಕ್ತಪಡಿಸಿದ್ರು.
ಹಾಕೋಝಕಿ ಎಂಬವರು ಕಳೆದ ನಾಲ್ಕು ವರ್ಷಗಳಿಂದ ಈ ಕ್ಲಿನಿಕ್ ನಡೆಸುತ್ತಿದ್ದಾರೆ. ವಸ್ತ್ರ ವಿನ್ಯಾಸ ಮಾಡ್ತಿದ್ದ ಹಾಕೋಝಕಿ ಬಳಿ ಅನೇಕರು ಗೊಂಬೆ ರಿಪೇರಿ ಮಾಡ್ತೀರಾ ಎಂದು ಕೇಳುತ್ತಿದ್ದರಂತೆ. ಇದರಿಂದ ಪ್ರೇರಣೆ ಪಡೆದ ಹಾಕೋಝಕಿ ಈ ಹೊಸ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಗಿದ್ದಾರೆ.