alex Certify ಸೆಲ್ಫಿ ವಿಡಿಯೋದಲ್ಲಿ ಕಂಡ ದೃಶ್ಯದಿಂದ ಬೆಚ್ಚಿಬಿದ್ದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಲ್ಫಿ ವಿಡಿಯೋದಲ್ಲಿ ಕಂಡ ದೃಶ್ಯದಿಂದ ಬೆಚ್ಚಿಬಿದ್ದ ನೆಟ್ಟಿಗರು

ಮನೆಯಲ್ಲಿ ಏಕಾಂಗಿಯಾಗಿರುವ ವ್ಯಕ್ತಿ‌‌ ಮಾಡಿದ ಡಾನ್ಸ್ ನ ವಿಡಿಯೋ ಈಗ ಎಲ್ಲೆಡೆ ಚರ್ಚೆಯಲ್ಲಿದೆ.‌

ವಿಡಿಯೋ ವೈರಲ್ ಆಗಿದ್ದು, ಡಾನ್ಸ್ ನ ವಿಶೇಷತೆಯಿಂದಲ್ಲ.‌ ಆ ವಿಡಿಯೋದಲ್ಲಿ ನೃತ್ಯ ಮಾಡುವ ವ್ಯಕ್ತಿಯ ಹಿನ್ನೆಲೆಯಲ್ಲಿ ಕಂಡ ದೃಶ್ಯದಿಂದ.

ಟಿಕ್ ಟಾಕ್ ಬಳಕೆದಾರ ‘ ದೋಜಾ‌ ಕಾಂಟ್‌ ಸೇ ನೋ’ ಎಂಬ ಹಾಡಿಗೆ ತನ್ನ ಮನೆಯಲ್ಲಿ ನಿಂತು ಸೆಲ್ಫಿ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದಾರೆ. ವಿಡಿಯೋದ ದ್ವಿತೀಯಾರ್ಧದಲ್ಲಿ ಆತ ನಿಂತ ಜಾಗದ ಹಿಂದಿನ‌ ಮಹಡಿ‌ ಮೆಟ್ಟಿಲಿನಲ್ಲಿ ಪ್ರಾಣಿಯೊಂದು ಇಣುಕಿದಂತೆ ಕಾಣುತ್ತದೆ.

ನೆಟ್ಟಿಗರು ಅದೇನು ಎಂದು ಪ್ರಶ್ನಿಸಿದ್ದಾರೆ. ಆತಂಕ ವ್ಯಕ್ತಪಡಿಸಿದ್ದಾರೆ. ಆಗ ವ್ಯಕ್ತಿ ತಾನೊಬ್ಬನೇ ಮನೆಯಲ್ಲಿದ್ದು, ನಾಯಿ, ಬೆಕ್ಕನ್ನೂ ಸಾಕಿಲ್ಲ ಎಂದಿದ್ದಾರೆ.

ಇದರಿಂದ ಸಾಕಷ್ಟು‌‌ ಕಮೆಂಟ್ ಗಳು‌ ಬಂದಿವೆ. ಹಲವು ಚರ್ಚೆಗಳು ಪ್ರಾರಂಭವಾಗಿವೆ. ಇದರಿಂದಾಗಿ ಆ ವ್ಯಕ್ತಿ ಮತ್ತೊಂದು ವಿಡಿಯೋ‌ ಮಾಡಿ ತಾನು ಸುರಕ್ಷಿತವಾಗಿದ್ದೇನೆ ಆತಂಕ ಬೇಡ ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...