alex Certify ದಂಗಾಗಿಸುತ್ತೆ ಈತ ಡೇಟಿಂಗ್​ ಅಪ್ಲಿಕೇಶನ್​ ಬಳಕೆ ಮಾಡದಿರುವುದರ ಹಿಂದಿನ ಕಾರಣ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದಂಗಾಗಿಸುತ್ತೆ ಈತ ಡೇಟಿಂಗ್​ ಅಪ್ಲಿಕೇಶನ್​ ಬಳಕೆ ಮಾಡದಿರುವುದರ ಹಿಂದಿನ ಕಾರಣ..!

ಇಷ್ಟ ಪಟ್ಟವರ ಜೊತೆ ಡೇಟಿಂಗ್​ ಹೋಗೋದು ಅನ್ನೋದು ಈಗಂತೂ ಕಾಮನ್​ ಆಗಿಬಿಟ್ಟಿದೆ. ಈಗಂತೂ ಡೇಟ್​ ಮಾಡುವವರಿಗಾಗಿಯೇ ವಿವಿಧ ವೆಬ್​ಸೈಟ್​ ಹಾಗೂ ಅಪ್ಲಿಕೇಶನ್​ ಕೂಡ ಲಭ್ಯವಿದೆ. ಆದರೆ ಅಮೆರಿಕದ 24 ವರ್ಷದ ಯುವಕನಿಗೆ ಮಾತ್ರ ಈ ಡೇಟಿಂಗ್​ ಅಪ್ಲಿಕೇಶನ್​ಗಳನ್ನ ಬಳಕೆ ಮಾಡೋಕೆ ಭಯವಂತೆ.

ಇಷ್ಟಕ್ಕೂ ಈ ಯುವಕ ಈ ರೀತಿ ಡೇಟಿಂಗ್​ ಅಪ್ಲಿಕೇಶನ್​ಗಳ ಬಗ್ಗೆ ಭಯ ಪಡೋಕೆ ಕಾರಣ ಈತನ ತಂದೆ. ಜೇವ್​ ಫೋರ್ಸ್​ ತಂದೆ ಒಬ್ಬ ವೀರ್ಯಾಣು ದಾನಿಯಾಗಿದ್ದು ಈಗಾಗಲೇ 500ಕ್ಕೂ ಹೆಚ್ಚು ಬಾರಿ ವೀರ್ಯಾಣುಗಳನ್ನ ದಾನ ಮಾಡಿದ್ದಾನೆ.

ಡೇಟಿಂಗ್​ ಅಪ್ಲಿಕೇಶನ್​ಗಳಲ್ಲಿ ತನ್ನ ತಂದೆಯ ವೀರ್ಯಾಣುದಿಂದಲೇ ಹುಟ್ಟಿದವರು ಯಾರಾದ್ರೂ ಸಿಕ್ಕಿಬಿಟ್ಟರೆ ಎಂಬ ಭಯದಿಂದ ಜೇವ್​ ಈ ಅಪ್ಲಿಕೇಶನ್​ಗಳನ್ನ ಬಳಕೆಯೇ ಮಾಡುತ್ತಿಲ್ಲ.

ಜೇವ್​ ತಾಯಿ ಕೂಡ ವೀರ್ಯಾಣು ದಾನಿಯ ಬಳಿಯೇ ವೀರ್ಯ ಪಡೆದು ಜೇವ್​ಗೆ ಜನ್ಮ ನೀಡಿದ್ದಾರೆ. ಜೇವ್​ಗೂ ಕೂಡ ಈ ವಿಚಾರ ತಿಳಿದಿದೆ. ಈಗಾಗಲೇ ಆತ ತನ್ನ ತಂದೆಯ ವೀರ್ಯಾಣುವನ್ನ ಪಡೆದು ಜನಿಸಿದ ವಿದ್ಯಾರ್ಥಿಯೊಬ್ಬನನ್ನ ತನ್ನ ಶಾಲೆಯಲ್ಲಿ ಪತ್ತೆ ಮಾಡಿದ್ದಾನೆ‌.

ಜೇವ್​ ತಂದೆ ಈವರೆಗೆ 500 ಬಾರಿ ವೀರ್ಯಾಣುಗಳನ್ನ ದಾನ ಮಾಡಿದ್ದಾರೆ ಹಾಗೂ 50ಕ್ಕೂ ಹೆಚ್ಚು ತಾಯಂದಿರು ಇದರಿಂದ ಮಕ್ಕಳನ್ನ ಪಡೆದಿದ್ದಾರೆ ಎನ್ನಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...