alex Certify ಪಾಕಿಸ್ತಾನದಲ್ಲಿ ಮಾತ್ರ ಇಂತದ್ದು ನಡೆಯಲು ಸಾಧ್ಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಲ್ಲಿ ಮಾತ್ರ ಇಂತದ್ದು ನಡೆಯಲು ಸಾಧ್ಯ…!

ಬಹುಶಃ ಪಾಕಿಸ್ತಾನದಲ್ಲಿ ಮಾತ್ರ ಇಂತಹ ತಿಳಿಗೇಡಿ ಕೆಲಸಗಳು ನಡೆಯಲು ಸಾಧ್ಯ ಎನ್ನಬಹುದು ಇಲ್ಲವೇ ಜಾಹೀರಾತಿನ ಪರಾಕಾಷ್ಠೆ ಎನ್ನಬಹುದು. ಪಾಕಿಸ್ತಾನದ ಅಬ್ ತಕ್ ಸುದ್ದಿವಾಹಿನಿ ಸುದ್ದಿವಾಚಕರು ಪ್ರೈಮ್ ಟೈಂನಲ್ಲಿ ಬರುವ ಕಾರ್ಯಕ್ರಮದ ಮಧ್ಯೆ ಜ್ಯೂಸ್ ಬ್ರ್ಯಾಂಡ್ ಒಂದರ ಪ್ರಮೋಟ್ ಮಾಡಿದ್ದಾರೆ. ಇದು ಈಗ ಸಖತ್ ವೈರಲ್ ಆಗಿದೆ.

ಪಾಕಿಸ್ತಾನದ ಸೋಷಿಯಲ್ ಮೀಡಿಯಾದಲ್ಲಿ ಭರ್ಜರಿ ಟ್ರೋಲ್ ಆಗುತ್ತಿದ್ದು, ನೆಟ್ಟಿಗರಿಂದ ತೀವ್ರ ಟೀಕೆಗಳು ವ್ಯಕ್ತವಾಗಿವೆ. ಟೆಟ್ರಾ ಪ್ಯಾಕ್ ನಲ್ಲಿರುವ 2 ಜ್ಯೂಸ್ ಪ್ಯಾಕೆಟ್ ಅನ್ನು ನಿರೂಪಕರು ಕುಡಿದಿದ್ದಾರೆ. ಅಂದರೆ ವಿರಾಮದ ನಂತರ ಶಾಟ್ ತೆಗೆದುಕೊಳ್ಳುವಾಗ ನಿರೂಪಕರಿಬ್ಬರೂ ಜ್ಯೂಸ್ ಪ್ಯಾಕೆಟ್ ಅನ್ನು ಬಾಯಲ್ಲಿಟ್ಟುಕೊಂಡು ಅದರ ಆಫರ್ ಬಗ್ಗೆ ವಿವರಣೆ ಕೊಟ್ಟಿದ್ದಾರೆ.

ಈ ವಿಡಿಯೋವನ್ನು ಪಾಕ್ ಪತ್ರಕರ್ತರಾದ ನೈಲಾ ಇನ್ಯಾತ್ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿ, 2 ಇನ್ 1, ಅಬ್ ತಕ್ ನ್ಯೂಸ್ ಆ್ಯಂಕರ್ ಗಳು ಬುಲೆಟಿನ್ ಜೊತೆಗೆ ಜ್ಯೂಸ್ ಮಾರಾಟ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ವಿಡಿಯೋ 60 ಸಾವಿರ ವೀಕ್ಷಣೆ ಕಂಡಿದೆ. ನೂರಾರು ಕಮೆಂಟ್ ಗಳು ಬಂದಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...