alex Certify ಅದ್ಯಾಕೋ ಏನೋ…! ನಾಲಿಗೆಯನ್ನು ಹೊರ ಚಾಚಿಕೊಂಡೇ ಇರುತ್ತೆ ಈ ಶ್ವಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅದ್ಯಾಕೋ ಏನೋ…! ನಾಲಿಗೆಯನ್ನು ಹೊರ ಚಾಚಿಕೊಂಡೇ ಇರುತ್ತೆ ಈ ಶ್ವಾನ

ಇಲ್ಲೊಂದು ಮುದ್ದಾದ ನಾಯಿಮರಿ ಇದೆ. ಬೇರ್ ಎಂಬ ಹೆಸರಿನಿಂದ ಕರೆಯುವ ನಾಯಿಗೆ ನಾಲ್ಕು ವರ್ಷದ ಹರೆಯ. ತನ್ನ ಕ್ಯೂಟ್ ನೆಸ್ ನಿಂದಲೇ ತನ್ನ ಸುತ್ತಮುತ್ತಲ ಜನರ ಮನ ಗೆದ್ದಿದೆ. ವಿಶೇಷವೆಂದರೆ ಈ ನಾಯಿ ನಾಲಿಗೆಯಿಂದ ಎಲ್ಲರನ್ನು ಗಮನ‌ ಸೆಳೆದಿದೆ.

ಪೊಮೆರಿಯನ್ ಹಾಗೂ ಶಿಹ್ ತ್ಸು ಮಿಶ್ರ ತಳಿಯ ಈ ಮರಿ ಮುದ್ದು ಮುದ್ದಾಗಿದ್ದು ತನ್ನ ನಾಲಿಗೆಯನ್ನು ಸದಾ ಹೊರಚಾಚಿಕೊಂಡಿರುತ್ತದೆ.

ಇದರ ಮಾಲೀಕ ಹೇಳುವಂತೆ, ಮರಿಗೆ ಆರು ತಿಂಗಳ ಇದ್ದಾಗಿನಿಂದಲೂ ಈ ರೀತಿ ನಾಲಿಗೆ ಹೊರ ಚಾಚಿಕೊಂಡಿರುವುದನ್ನು ಗಮನಿಸಿದ್ದಾರೆ.

ಇದು ವೈದ್ಯಕೀಯ ನಿರ್ಲಕ್ಷದಿಂದ ಆದ ಸಮಸ್ಯೆಯಲ್ಲ, ಆದರೆ ಇದು ಹೇಗೆ ಸಂಭವಿಸಿತು ಎಂಬುದನ್ನು ವಿವರಿಸಲು ಸಾಧ್ಯವಿಲ್ಲ ಎಂದು ಈ ಮರಿಯನ್ನು ಗಮನಿಸುವ ವೈದ್ಯರು ಹೇಳುತ್ತಾರೆ.

ನಾಲಿಗೆ ಹೊರ ಚಾಚಿಕೊಂಡಿರುವುದರಿಂದ ಆಗಿಂದಾಗೆ ನಾಲಿಗೆ ಒಣಗುವುದನ್ನು ಅದರ ಮಾಲೀಕರು ಗಮನಿಸಿದ್ದಾರೆ. ಇದು ನಾಯಿಗೆ ಯಾವುದೇ ಅಸ್ವಸ್ಥತೆ ಉಂಟುಮಾಡುವುದಿಲ್ಲ, ಒಣಗಿದಂತೆ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...