alex Certify ಸಂಚಲನ ಸೃಷ್ಟಿಸಿದ 3 ತಿಂಗಳ ಮಗುವಿನ ಮುಂಗೋಪದ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಚಲನ ಸೃಷ್ಟಿಸಿದ 3 ತಿಂಗಳ ಮಗುವಿನ ಮುಂಗೋಪದ ಫೋಟೋ

3 ತಿಂಗಳ ವಯಸ್ಸಿನ ಮಗುವಿನ ವಿವಿಧ ಬಗೆಯ ಮುಂಗೋಪದ ಫೋಟೋಗಳು ಸಾಮಾಜಿಕ‌ ಜಾಲತಾಣದಲ್ಲಿ ಸಂಚಲನ ಸೃಷ್ಟಿಸಿದೆ. ಆ ಮಗುವನ್ನು ಆಲಿವ್ ಎಂದು ಗುರುತಿಸಲಾಗಿದ್ದು, ಆಸ್ಟ್ರೇಲಿಯಾ ಪ್ರಜೆ.

ಆಲಿವ್ ನ ತಾಯಿ ಆಲಿಸ್ ಟ್ರಾನ್ಸ್ ಫೀಲ್ಡ್, ತನ್ನ ಮಗುವಿಗೆ ಫೋಟೋ ಐಡಿ ಇಲ್ಲ ಎಂದು ಗಮನಕ್ಕೆ ಬಂದಾಗ ಪಾಸ್ ಪೋರ್ಟ್ ಫೋಟೋಗೆ ಹುಡುಕಾಡಿದ್ದಾರೆ. ಲಾಕ್ಡೌನ್ ಕಾರಣ ಮನೆಯಿಂದ ಹೊರಗೆ ಹೋಗುವಂತಿಲ್ಲ ಆದ್ದರಿಂದ ತಾವೇ ಸ್ವತಃ ಫೋಟೋ ತೆಗೆಯಲು ಪ್ರಯತ್ನಿಸಿದ್ದಾರೆ.

ಫೋಟೋ ತೆಗೆಯಲು ಪತಿ ಜೇಮ್ಸ್ ಸಹಕಾರ ಕೋರಿ‌ ಕರೆಯನ್ನೂ ಮಾಡಿದರು. ಏನೇ ಪ್ರಯತ್ನಿಸಿದರು ಮಗುವಿನ ಮುಖದಲ್ಲಿ ಮಂದಹಾಸ ಮೂಡಲಿಲ್ಲ, ತಾನು ತೆಗೆದ ಎಲ್ಲ ಫೋಟೋಗಳನ್ನು ಆಕೆ ಫೇಸ್ಬುಕ್ನಲ್ಲಿ ಹಂಚಿಕೊಂಡರು.

2020ರ ಒಟ್ಟಾರೆ ಭಾವನೆ ಈ ಫೋಟೋದಲ್ಲಿ ಇದೆಯೆಂದು ಆಕೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...