alex Certify ವಾಹನದ ಚಕ್ರದಲ್ಲಿ ತಲೆ ಸಿಲುಕಿಸಿಕೊಂಡು ಪರದಾಡಿದ ನರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನದ ಚಕ್ರದಲ್ಲಿ ತಲೆ ಸಿಲುಕಿಸಿಕೊಂಡು ಪರದಾಡಿದ ನರಿ

ಸಾಕುಪ್ರಾಣಿಗಳು ಮನೆಗಳಲ್ಲಿ ತಲೆ, ಬಾಲ ಸಿಕ್ಕಿಸಿಕೊಂಡು ನಗೆ ಬುಗ್ಗೆ ಏಳಲು ಕಾರಣವಾಗುತ್ತವೆ. ಅಂತ ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ ಒಂದಷ್ಟು ಮನರಂಜನೆಯನ್ನು ನೀಡುತ್ತಾ ಬಂದಿದೆ.

ಇದೀಗ ಲಂಡನ್‌ನಿಂದ ಇಂಥದ್ದೇ ಒಂದು ಘಟನೆ ವರದಿಯಾಗಿದೆ. ಅಲ್ಲಿ ನರಿಯೊಂದು ತನ್ನ ತಲೆಯನ್ನು ವೀಲ್ ಅಲಾಯ್ ಗೆ ಸಿಲುಕಿಕೊಂಡು ಪರದಾಡಿದೆ.

ಕಾರಿನ ಚಕ್ರದಲ್ಲಿ ಸಿಲುಕಿಕೊಂಡ ನರಿಯನ್ನು ರಕ್ಷಿಸಲು ಸಮೀಪದ ಮನೆಯ ಮಾಲೀಕರು ಅದರ ಕುತ್ತಿಗೆಗೆ ಗ್ರೀಸ್ ಹಚ್ಚಿ ಪ್ರಯತ್ನಿಸಿದರು. ಆದರೆ ಆ ಪ್ರಯತ್ನ ಕೆಲಸ ಮಾಡಲಿಲ್ಲ.

ಬಳಿಕ ಸ್ಥಳಕ್ಕಾಗಮಿಸಿದ ಪ್ರಾಣಿ ರಕ್ಷಣಾ ಪಡೆ ಮತ್ತು ಅಗ್ನಿಶಾಮಕದಳ, ಕಾರಿನ ವೀಲ್ ಅಲಾಯ್ ಕತ್ತರಿಸಿ ನರಿಯನ್ನು ರಕ್ಷಿಸಿದರು.

ಮನೆಯ ಮಾಲೀಕ ಕ್ರಿಸ್ಟಿ ಇಡೀ ಘಟನೆಯನ್ನು ಮಾಧ್ಯಮಗಳಿಗೆ ಕಟ್ಟಿಕೊಟ್ಟಿದ್ದಾರೆ. ಜೊತೆಗೆ ಅಪಾಯದಲ್ಲಿ ಸಿಲುಕಿಕೊಂಡ ನರಿಗೆ ತಾವು ನೀರು ಕುಡಿಸಿದನ್ನು ಸಹ ಅವರು ಹೇಳಿಕೊಳ್ಳಲು ಮರೆಯಲಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...