alex Certify ಲಕ್ಷಾಂತರ ರೂ. ಮೌಲ್ಯದ ದ್ರಾಕ್ಷಿಯೊಂದಿಗೆ ಕಳ್ಳರು ಪರಾರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಕ್ಷಾಂತರ ರೂ. ಮೌಲ್ಯದ ದ್ರಾಕ್ಷಿಯೊಂದಿಗೆ ಕಳ್ಳರು ಪರಾರಿ

Thieves Steal Grapes Worth Nearly Rs 2.8 Lakh from Vineyard in Canada

ಸೀಸನ್‌ನ ಕೊನೆಯ ದ್ರಾಕ್ಷಿ ಗೊಂಚಲುಗಳನ್ನು ಕೀಳುವ ಭರದಲ್ಲಿದ್ದ ಕೆನಡಾದ ವಿನೋಬಲ್ ಕೋಟಿ ರೋಗ್‌ಮಾಂಟ್‌ ವೈನ್‌ಯಾರ್ಡ್‌ನ ಕೆಲಸಗಾರರಿಗೆ ಭಾರೀ ಅಚ್ಚರಿಯೊಂದು ಕಾದಿತ್ತು.

ಗುರುವಾರ ರಾತ್ರೋರಾತ್ರಿ ವೈನ್‌ ಯಾರ್ಡ್‌ಗೆ ಬಂದ ಕಳ್ಳರು ಸುಮಾರು ಅರ್ಧ ಟನ್‌ನಷ್ಟು ದ್ರಾಕ್ಷಿಯನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಇದು 300+ ಬಾಟಲಿ ವೈನ್ ತಯಾರಿಸಲು ಬೇಕಾಗುವಷ್ಟು ದ್ರಾಕ್ಷಿಯಾಗಿದೆ. ಬೆಳಿಗ್ಗೆ ವೇಳೆ ಕೆಲಸಗಾರರು ದ್ರಾಕ್ಷಿ ಸಾಲುಗಳಿಗೆ ಹೋಗಿ ದ್ರಾಕ್ಷಿಗಳನ್ನು ಕೀಳಲು ನೋಡಿದ ವೇಳೆ ಸಾಲುಗಳು ಖಾಲಿ ಇರುವುದು ಕಂಡುಬಂದಿದೆ.

5000 ಕೆನಡಾ ಡಾಲರ್‌ (2.8 ಲಕ್ಷ ರೂ.ಗಳು) ಮೌಲ್ಯದಷ್ಟು ದ್ರಾಕ್ಷಿಯನ್ನು ಕಿತ್ತುಕೊಂಡಿರುವ ಕಳ್ಳರು ಭಾರೀ ವ್ಯವಸ್ಥಿತ ಪಿತೂರಿಯೊಂದಿಗೆ ಈ ಕಳ್ಳತನ ನಡೆಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...