alex Certify ಮನೆಗೆ ನುಗ್ಗಿ ಲ್ಯಾಪ್​ ಟಾಪ್​ನಲ್ಲಿ ನೀಲಿಚಿತ್ರ ಡೌನ್​ಲೋಡ್​ ಮಾಡಿಕೊಂಡಿದ್ದಾತ ಜೈಲು ಪಾಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆಗೆ ನುಗ್ಗಿ ಲ್ಯಾಪ್​ ಟಾಪ್​ನಲ್ಲಿ ನೀಲಿಚಿತ್ರ ಡೌನ್​ಲೋಡ್​ ಮಾಡಿಕೊಂಡಿದ್ದಾತ ಜೈಲು ಪಾಲು

ಮೂವರು ವಿದ್ಯಾರ್ಥಿನಿಯರು ವಾಸವಿದ್ದ ಮನೆಗೆ ನುಗ್ಗಿದ ವ್ಯಕ್ತಿಯೊಬ್ಬ ಲ್ಯಾಪ್​ಟಾಪ್ ಬಳಸಿಕೊಂಡು ನೀಲಿ ಚಿತ್ರಗಳನ್ನ ಡೌನ್​ ಲೋಡ್​ ಮಾಡಿ ಸಿಕ್ಕಿಬಿದ್ದಿದ್ದು, ಆರೋಪಿಗೆ ಕ್ಯಾಲಿಫೋರ್ನಿಯಾದ ನ್ಯಾಯಾಲಯವೊಂದು 6 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಲ್ಯಾಪ್​ಟಾಪ್​ನಲ್ಲಿ ವಿಡಿಯೋ ಡೌನ್​ಲೋಡ್​ ಆಗುತ್ತಿದ್ದ ವೇಳೆ ಈತ ಮನೆಯಲ್ಲಿದ್ದ ತಿನಿಸುಗಳನ್ನ ತಿನ್ನುತ್ತಾ ಕೂತಿದ್ದ ಎಂದು ಚಾರ್ಜ್​ಶೀಟ್​ ವರದಿ ಹೇಳಿದೆ.

22 ವರ್ಷದ ಜೊನಾಥನ್​ ಜೋಸ್​ ರುಯೀಸ್​ ಓರೆಂಜ್​ ಪಟ್ಟಣದಲ್ಲಿದ್ದ ಮನೆಗೆ ನುಗ್ಗಿದ್ದು ಮಾತ್ರವಲ್ಲದೇ ಅಲ್ಲಿದ್ದ ಲ್ಯಾಪ್ಟಾಪ್​ನಿಂದ ನೀಲಿ ಚಿತ್ರಗಳನ್ನ ಡೌನ್​ಲೋಡ್​ ಮಾಡಿದ್ದಾನೆ.

ಕೋರ್ಟ್​ನಲ್ಲಿ ತಪ್ಪೊಪ್ಪಿಕೊಂಡ ಜೋನಾಥನ್​ಗೆ 6 ವರ್ಷ 8 ತಿಂಗಳ ಜೈಲು ಶಿಕ್ಷೆಯನ್ನ ವಿಧಿಸಲಾಗಿದೆ. ಈ ಘಟನೆಯು 2018ರ ಅಕ್ಟೋಬರ್​ ತಿಂಗಳಲ್ಲಿ ನಡೆದಿತ್ತು.

ವರದಿಗಳ ಪ್ರಕಾರ ಜೋನಾಥನ್​ ಮನೆಗೆ ನುಗ್ಗಿ ನೀಲಿ ಚಿತ್ರಗಳನ್ನ ಡೌನ್​ಲೋಡ್​ ಮಾಡಿದ್ದು ಮಾತ್ರವಲ್ಲದೇ ಮನೆಯಲ್ಲಿದ್ದ ಹಾಲು ಕುಡಿದು ಕುಕ್ಕೀಸ್​ಗಳನ್ನ ತಿಂದಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...