alex Certify ಕ್ರಿಸ್​ಮಸ್​ ಗಿಫ್ಟ್​ ನೋಡುತ್ತಲೇ ಕಣ್ಣೀರಿಟ್ಟ ಸಹೋದರರು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಸ್​ಮಸ್​ ಗಿಫ್ಟ್​ ನೋಡುತ್ತಲೇ ಕಣ್ಣೀರಿಟ್ಟ ಸಹೋದರರು..!

ಕ್ರಿಸ್​ಮಸ್​ ಹಬ್ಬ ಎಂದ ಕೂಡಲೇ ನೆನಪಾಗೋದು ಚಳಿಗಾಲ, ಕ್ರಿಸ್​ಮಸ್​ ಗಿಡ, ಅಲಂಕಾರಿಕ ಸಾಧನ, ಸಾಂತಾಕ್ಲೂಸ್​ ಹಾಗೂ ಸಿಕ್ಕಾಪಟ್ಟೆ ಉಡುಗೊರೆಗಳು. ಕ್ರಿಸ್​ಮಸ್​ ಹಬ್ಬ ಅಂದರೆ ಸಾಕು ಹಲವರು ತಮ್ಮ ಪ್ರೀತಿ ಪಾತ್ರರಿಂದ ಉತ್ತಮ ಉಡುಗೊರೆ ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಇರ್ತಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋವೊಂದರಲ್ಲಿ ಈ ವರ್ಷದ ಕ್ರಿಸ್​ಮಸ್​ ಗಿಫ್ಟ್ ಬಾಕ್ಸ್​​ ತೆಗೆದ ಮೂವರು ಸಹೋದರರು ಸಂತೋಷದ ಕಡಲಲ್ಲಿ ತೇಲಾಡಿದ್ದಾರೆ.

ರೆಡ್ಡಿಟ್ನ ನಲ್ಲಿ ಹಂಚಿಕೊಳ್ಳಲಾಗಿರುವ ವಿಡಿಯೋದಲ್ಲಿ ಮೂವರು ಸಹೋದರರು ಕ್ರಿಸ್​ಮಸ್​ ಟ್ರೀಯನ್ನು ಅಲಂಕರಿಸಲಾದ ಕೊಠಡಿಯಲ್ಲಿ ಕುಳಿತಿರುತ್ತಾರೆ.

ಮಂಚದ ಮೇಲೆ ಕುಳಿತಿದ್ದ ಸಹೋದರರಿಗೆ ಕಣ್ಣು ಮುಚ್ಚಿಕೊಳ್ಳುವಂತೆ ಕುಟುಂಬಸ್ಥರು ಹೇಳ್ತಾರೆ. ಅವರು ಕಣ್ಣು ತೆರೆಯೋವಷ್ಟರಲ್ಲಿ ಕುಟುಂಬಸ್ಥರು ಅವರ ಮುಂದೆ ಬಾಕ್ಸೊಂದನ್ನ ಇಟ್ಟಿರ್ತಾರೆ.

ಮೂವರು ಸಹೋದರರು ಬಾಕ್ಸ್​ ತೆರೆಯುತ್ತಿದ್ದಂತೆ ಪುಟ್ಟ ನಾಯಿಮರಿ ಕಾಣುತ್ತೆ. ಮೂವರಲ್ಲಿ ಓರ್ವನಂತೂ ಖುಷಿಯಲ್ಲಿ ಅಳೋಕೆ ಶುರು ಮಾಡುತ್ತಾನೆ. ಬಳಿಕ ಮೂವರೂ ಕೆಂಪು ಬಣ್ಣದ ಧಿರಿಸನ್ನ ಹಾಕಿದ್ದ ನಾಯಿಯನ್ನ ಮುದ್ದಾಡುತ್ತಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...