alex Certify ಬಯಲಾಯ್ತು ಮನುಷ್ಯ ಗಾತ್ರದ ಬಾವಲಿ ಅಸಲಿಯತ್ತು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಯಲಾಯ್ತು ಮನುಷ್ಯ ಗಾತ್ರದ ಬಾವಲಿ ಅಸಲಿಯತ್ತು…!

ಫಿಲಿಪ್ಪೈನ್ಸ್ ನಲ್ಲಿ ಮನುಷ್ಯ ಗಾತ್ರದ ಬಾವಲಿಯೊಂದು ಪತ್ತೆಯಾಗಿದೆ ಎಂಬ ಫೋಟೋ, ವಿಡಿಯೋ ವೈರಲ್ ಆಗಿದೆ.

ಸಣ್ಣ ಗಾತ್ರದ ಬಾವಲಿಯನ್ನು ಕಂಡರೆ ಹೆದರಿಕೆ ಆಗುತ್ತದೆ. ಅದರಲ್ಲೂ ಕನಸಿನಲ್ಲಿ ಕಪಟ ಕಂಡರೂ ಹೆದರುವುದುಂಟು.

ಅಂತಹದರಲ್ಲಿ ಮನುಷ್ಯ ಗಾತ್ರದ ಬಾವಲಿ ಎಂದರೇನು ಕಮ್ಮಿಯೇ ? ಸುಮ್ಮನೆ ಅದರ ಗಾತ್ರ, ಮುಖ-ಮೂತಿ, ಕಣ್ಣು, ರೆಕ್ಕೆಗಳನ್ನು ಕಣ್ಮುಂದೆ ತಂದುಕೊಳ್ಳಿ. ಭಯ ಆಗುತ್ತದೆಯಲ್ಲವೆ ? ಅದರಲ್ಲೂ ಫಿಲಿಪ್ಪೈನ್ಸ್ ನಲ್ಲಿ ನೇತಾಡುತ್ತಿದ್ದ ಈ ದಢೂತಿ ಬಾವಲಿ ಕಂಡರಂತೂ ಆತಂಕ ಹುಟ್ಟುತ್ತದೆ.

2018 ರಲ್ಲಿ ಟ್ವಿಟ್ಟರ್ ಅಲ್ಲಿ ಹರಿದಾಡಿದ್ದ ಈ ದೈತ್ಯದೇಹಿಯ ಫೋಟೋ ಮತ್ತೀಗ ಟ್ರೆಂಡ್ ಆಗಿದ್ದು, ವೈರಲ್ ಆಗಿದೆ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಅನೇಕರು, ಇದು ಬಾವಲಿ ಅಲ್ಲವೇ ಅಲ್ಲ. ವಿಡಿಯೋದಲ್ಲಿ ನಾಯಿ ಬೊಗಳಿದ ಶಬ್ದ ಕೇಳುತ್ತದೆ. ನಾಯಿ ಅಥವಾ ನರಿಯನ್ನು ಹಿಡಿದು ನೇತು ಹಾಕಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಫೋಟೋ ಅಪ್ಲೋಡ್ ಮಾಡಿದಾತನೇ ಇದನ್ನು ಒಪ್ಪಿಕೊಂಡಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...