alex Certify ಟ್ವೀಟಿಗರಿಗೆ ಶುರು ಕಮಲಾ ಹ್ಯಾರಿಸ್​ ನಿವಾಸದ ಚಿಂತೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ವೀಟಿಗರಿಗೆ ಶುರು ಕಮಲಾ ಹ್ಯಾರಿಸ್​ ನಿವಾಸದ ಚಿಂತೆ..!

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್​ ಪಕ್ಷದಿಂದ ಉಪಾಧ್ಯಕ್ಷ ಸ್ಥಾನದ ರೇಸ್​ನಲ್ಲಿರುವ ಕಮಲಾ ಹ್ಯಾರೀಸ್​ ಗೆಲುವಿಗಾಗಿ ಅನೇಕ ಭಾರತೀಯರು ಉತ್ಸುಕರಾಗಿದ್ದಾರೆ. ಅದರಲ್ಲೂ ನೆಟ್ಟಿಗರಂತೂ ಕಮಲಾ ಉಪಾಧ್ಯಕ್ಷೆಯಾದರೆ ಆಕೆ ವಾಸ್ತವ್ಯ ಹೂಡುವ ಮನೆ ಬಗ್ಗೆ ಹೆಚ್ಚಿನ ಕುತೂಹಲ ತೋರುತ್ತಿದ್ದಾರೆ. ಶ್ವೇತ ಭವನವನ್ನ ಕಮಲಾ ವಿಲಾಸ ಎಂದು ಮರುನಾಮಕರಣ ಮಾಡೋಣ ಅಂತಾ ಹಾಸ್ಯ ಚಟಾಕಿ ಹಾರಿಸುತ್ತಿದ್ದಾರೆ.

ಕಮಲಾ ಉಪಧ್ಯಕ್ಷ ಸ್ಥಾನವನ್ನ ಗೆದ್ದರೆ – ‘ನಂಬರ್ ಒನ್ ಅಬ್ಸರ್ವೇಟರಿ ಸರ್ಕಲ್’ನಲ್ಲಿ ವಾಸ ಮಾಡುತ್ತಾರೆ- ಮತ್ತು ಇದು ಯುಎಸ್ ನೇವಲ್ ಅಬ್ಸರ್ವೇಟರಿಯ ಮೈದಾನದಲ್ಲಿದೆ, ವಾಷಿಂಗ್ಟನ್ ಡಿಸಿಯ ಶ್ವೇತಭವನದಿಂದ ಕೆಲವೇ ಮೈಲಿ ದೂರದಲ್ಲಿದೆ.

19ನೇ ಶತಮಾನದಲ್ಲಿ ನಿರ್ಮಾಣವಾದ ಈ ಅರಮನೆ ಜಾಗ 12 ಎಕರೆ ವಿಸ್ತೀರ್ಣ ಹೊಂದಿದೆ. 1983ರಲ್ಲಿ ವೀಕ್ಷಣಾಲಯದ ಅಧೀಕ್ಷಕರ ನಿವಾಸ ಅಂತಾ ಕರೆಯಲಾಗುತ್ತಿತ್ತು. 1924ರ ಬಳಿಕ ಇದನ್ನ ನೌಕಾ ಕಾರ್ಯಾಚರಣೆಯ ಮುಖ್ಯಸ್ಥರಿಗೆ ನೀಡಲಾಯ್ತು. ಸುಮಾರು 50 ವರ್ಷಗಳ ಹಿಂದೆ ವಾಲ್ಟರ್​ ಮೊಂಡೆಲ್​ ಮತ್ತವರ ಕುಟುಂಬ ಈ ಮನೆಗೆ ಸ್ಥಳಾಂತರಗೊಂಡ ಬಳಿಕ ಇದನ್ನ ಅಮೆರಿಕ ಉಪಾಧ್ಯಕ್ಷರ ನಿವಾಸ ಅಂತಾ ತೀರ್ಮಾನ ಮಾಡಲಾಯ್ತು.

— Anand Datla (@SportaSmile) November 5, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...