alex Certify ‘ನಾಸಾ’ದ ಹೆಲಿಕಾಪ್ಟರ್ ಗೆ ಹೆಸರಿಟ್ಟ ಭಾರತೀಯ ಮೂಲದ ಬಾಲಕಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ನಾಸಾ’ದ ಹೆಲಿಕಾಪ್ಟರ್ ಗೆ ಹೆಸರಿಟ್ಟ ಭಾರತೀಯ ಮೂಲದ ಬಾಲಕಿ

ಅಮೆರಿಕಾದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ಮಂಗಳನ ಅಂಗಳದಲ್ಲಿ ಹಾರಾಟ ನಡೆಸಲು ಹೆಲಿಕಾಪ್ಟರ್ ವೊಂದನ್ನು ಸಿದ್ಧಪಡಿಸಿದೆ.

ಈ ಹೆಲಿಕಾಪ್ಟರ್ ಗೆ ಹೆಸರು ನೀಡುವಂತೆ ಕೋರಿ ನಾಸಾ ‘ನೇಮ್ ದಿ ರೋವರ್’ ಎಂಬ ಹೆಸರಿನಲ್ಲಿ ಪ್ರಬಂಧ ಸ್ಪರ್ಧೆಯೊಂದನ್ನು ಏರ್ಪಡಿಸಿದ್ದು ಇದರಲ್ಲಿ ಭಾರತೀಯ ಮೂಲದ ಬಾಲಕಿ ಗೆಲುವು ಸಾಧಿಸಿದ್ದಾರೆ.

ಅಲಬಾಮಾದ ನಾರ್ತ್ ಪೋರ್ಟ್ ಪ್ರೌಢಶಾಲೆಯ ವಿದ್ಯಾರ್ಥಿನಿ ವನೀಜಾ ರೂಪಾನಿ, ಈ ಹೆಲಿಕಾಪ್ಟರ್ ಗೆ ‘ಇಂಜಿನ್ಯೂಯಿಟಿ’ ಎಂಬ ಹೆಸರಿನೊಂದಿಗೆ ತಮ್ಮ ಪ್ರಬಂಧ ಮಂಡಿಸಿದ್ದು, ಗೆಲುವು ಸಾಧಿಸಿದ್ದಾರೆ ಎಂದು ನಾಸಾ ಟ್ವೀಟ್ ಮಾಡಿದೆ.

ಈ ಸ್ಪರ್ಧೆಯಲ್ಲಿ ಅಮೆರಿಕಾದ ವಿದ್ಯಾರ್ಥಿಗಳಿಂದ 28000 ಪ್ರಬಂಧ ಮಂಡನೆಯಾಗಿದ್ದು, ವನೀಜಾ ರೂಪಾನಿ ಆಯ್ಕೆಯಾಗಿದ್ದಾರೆ. ಅನ್ಯ ಗ್ರಹದಲ್ಲಿ ಹಾರಾಟ ನಡೆಸಲಿರುವ ಮೊದಲ ಹೆಲಿಕಾಪ್ಟರ್ ಎಂಬ ಹೆಗ್ಗಳಿಕೆಗೆ ವನೀಜಾ ಹೆಸರಿಟ್ಟಿರುವ ಹೆಲಿಕಾಪ್ಟರ್ ಪಾತ್ರವಾಗಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...