alex Certify ಈ ಕಾರಣಕ್ಕೆ ಬದಲಾಯ್ತು ʼಹಾಲಿವುಡ್ʼ‌ ಹೆಸರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಕಾರಣಕ್ಕೆ ಬದಲಾಯ್ತು ʼಹಾಲಿವುಡ್ʼ‌ ಹೆಸರು

ಲಾಸ್​ ಎಂಜಲೀಸ್​ನಲ್ಲಿರುವ ಅಮೆರಿಕದ ಸಾಂಪ್ರದಾಯಿಕ ಐಕಾನ್​ ಹಾಲಿವುಡ್​ ಚಿಹ್ನೆಯನ್ನ ಸೋಮವಾರ ಹಾಲಿಬಾಬ್​ (Hollyboob) ಎಂದು ಬದಲಾಯಿಸಲಾಗಿದೆ. ಸ್ತನ ಕ್ಯಾನ್ಸರ್​ ಬಗೆಗಿನ ಜಾಗೃತಿ ಸಂದೇಶ ಸಾರುವ ಸಲುವಾಗಿ ಯಾರೋ ಅಪರಿಚಿತರು ಈ ಬದಲಾವಣೆ ಮಾಡಿದ್ದಾರೆ ಎಂದು ವರದಿ ಹೇಳಿದೆ.

ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ಈ ಫೋಟೋದಲ್ಲಿ ಡಬ್ಲೂ ಜಾಗದಲ್ಲಿ ಬಿ ಅಕ್ಷರವನ್ನ ಇರಿಸಲಾಗಿದೆ. ಹಾಗೂ ಡಿ ಅಕ್ಷರದಲ್ಲಿ ಕೊಂಚ ಬದಲಾವಣೆ ಮಾಡಿ ಬಿ ಎಂದು ಬರೆಯಲಾಗಿದೆ.

ಮಧ್ಯಾಹ್ನ 1 :15ರ ಸುಮಾರಿಗೆ ಐವರು ಪುರುಷರು ಹಾಗೂ ಓರ್ವ ಮಹಿಳೆಯನ್ನೊಳಗೊಂಡ ತಂಡ ಈ ಕೆಲಸ ಮಾಡಿದ್ದನ್ನ ಎಲ್​ಎಪಿಡಿ ಭದ್ರತಾ ಸಿಬ್ಬಂದಿ ಗಮನಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ. ಆದರೆ ಈ ಆರು ಮಂದಿ ಹಾಲಿವುಡ್ ಚಿಹ್ನೆಗೆ ಯಾವುದೇ ಹಾನಿ ಉಂಟು ಮಾಡಿಲ್ಲ. ಹೀಗಾಗಿ ಇದನ್ನ ಅಪರಾಧ ಎಂದು ಹೇಳಲಾಗೋಲ್ಲ ಎಂದು ಎಲ್​ಎಪಿಡಿ ಕ್ಯಾಪ್ಟನ್​ ಹೇಳಿದ್ದಾರೆ.

ಹಾಲಿಬಾಬ್​ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು ಸ್ತನ ಕ್ಯಾನ್ಸರ್ ಬಗೆಗಿನ ಜಾಗೃತಿಯನ್ನ ಪ್ರಶಂಸಿಸಿದ್ದಾರೆ.

— Vsauce (@tweetsauce) February 1, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...