alex Certify ಲಂಡನ್​ನ ಪ್ರಖ್ಯಾತ ವಸ್ತು ಸಂಗ್ರಹಾಲಯ ಸೇರಿದ ಬೇಬಿ ಟ್ರಂಪ್​…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಂಡನ್​ನ ಪ್ರಖ್ಯಾತ ವಸ್ತು ಸಂಗ್ರಹಾಲಯ ಸೇರಿದ ಬೇಬಿ ಟ್ರಂಪ್​…!

ನಾಳೆ ಅಮೆರಿಕ ಅಧ್ಯಕ್ಷ ಸ್ಥಾನದ ಪಟ್ಟದಿಂದ ಕೆಳಗಿಳಿಯಲಿರುವ ಡೊನಾಲ್ಡ್​ ಟ್ರಂಪ್​​ರನ್ನ ಹೋಲುವ ಕೇಸರಿ ಬಣ್ಣದ ಹೀಲಿಯಂ ತುಂಬಿದ ದೊಡ್ಡ ಬಲೂನ್​​ ಲಂಡನ್​​ನ ಜನಪ್ರಿಯ ವಸ್ತು ಸಂಗ್ರಹಾಲಯವನ್ನು ಸೇರಲಿದೆ.

ಈ ಬೇಬಿ ಟ್ರಂಪ್​ ಆಕೃತಿಯ ಬಲೂನುಗಳನ್ನ 2018ರಲ್ಲಿ ಬ್ರಿಟಿಷ್​ ಕಲಾವಿದ ಮ್ಯಾಥ್ಯೂ ಬೋನರ್​​ ಎಂಬವರು ರಚಿಸಿದ್ದಾರೆ. ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್​​ ಯುನೈಟೆಡ್​ ಕಿಂಗ್​​ಡಮ್​ ಭೇಟಿಯನ್ನ ವಿರೋಧಿಸಿ ಲಂಡನ್​​ನ ಪಾರ್ಲಿಮೆಂಟ್​ ಸ್ಕ್ವೇರ್​ ಮೇಲೆ ಮೊದಲ ಬಾರಿಗೆ ಹಾರಿಸಲಾಗಿತ್ತು.

ಇದಾದ ಬಳಿಕ ಈ ಬಲೂನು ಫ್ರಾನ್ಸ್, ಅರ್ಜೆಂಟೀನಾ, ಐರ್ಲೆಂಡ್​ ಹಾಗೂ ಡೆನ್ಮಾರ್ಕ್​ನಂತಹ ಅನೇಕ ಕಡೆ ಕಂಡು ಬಂದಿದೆ. ಜಗತ್ತನ್ನೇ ಪ್ರವಾಸ ಮಾಡಿ ಬಂದ ಬೇಬಿ ಟ್ರಂಪ್​​ ಬಲೂನು ಇದೀಗ ಅಂತಿಮ ವಿಶ್ರಾಂತಿ ಸ್ಥಳವಾದ ಲಂಡನ್​ ಮ್ಯೂಸಿಯಂ ಸೇರಲಿದೆ. ಮ್ಯೂಸಿಯಂನಲ್ಲಿ ಈ ಬೇಬಿ ಟ್ರಂಪ್​ನ್ನು ಸಂರಕ್ಷಿಡಲಾಗುವುದು ಎಂದು ಮ್ಯೂಸಿಯಂ ಪ್ರಕಟಣೆಯಲ್ಲಿ ತಿಳಿಸಿದೆ.

ಬೇಬಿ ಟ್ರಂಪ್​ ಬಲೂನ್​​ ಮ್ಯೂಸಿಯಂನಲ್ಲಿ ಪ್ರತಿಭಟನಾ ಸಂಗ್ರಹದ ಒಂದು ಭಾಗವಾಗಿರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...