alex Certify ಮಗಳ ಹೋಟೆಲ್ ಗೆ ಅಪ್ಪನೇ ಕಸ್ಟಮರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗಳ ಹೋಟೆಲ್ ಗೆ ಅಪ್ಪನೇ ಕಸ್ಟಮರ್…!

ಅಪ್ಪ – ಮಗಳ ಬಂಧ, ಅನುಬಂಧ ಯಾವಾಗಲೂ ಅತ್ಯಂತ ಗೌರವ, ತುಂಬಾ ಪ್ರೀತಿ ಹಾಗೂ ಕಾಳಜಿಯಿಂದ‌ ತುಂಬಿರುತ್ತದೆ.
ತಂದೆ ಯಾವಾಗಲೂ ತನ್ನ ಮಗಳಿಗಾಗಿ, ಆಕೆಯ ಖುಷಿಗಾಗಿ ಏನು ಬೇಕಾದರೂ ಮಾಡಲು ಸಿದ್ಧನಿರುತ್ತಾನೆ. ಮಗಳಿಗೆ ಆಕೆಯ ತಂದೆಯೇ ಜಗತ್ತು.‌ ಆತನೇ ಉತ್ತಮ ಪುರುಷನಾಗಿರುತ್ತಾನೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿರುವ ತಂದೆ – ಮಗಳ ಫೋಟೋ ಈ ವಿಷಯವನ್ನು ಸಾಕ್ಷೀಕರಿಸುತ್ತದೆ.

ಇನ್ಸ್ಟಾಗ್ರಾಂ‌ನಲ್ಲಿ ಕ್ರಿಸ್ ಎಂಬುವವರು ಫೋಟೋ ಅಪ್‌ಲೋಡ್ ಮಾಡಿದ್ದಾರೆ. ಅವರು ಆಟಿಕೆಯ ರೆಸ್ಟೋರೆಂಟ್ ನಲ್ಲಿ ಗ್ರಾಹಕರಾಗಿ ಕುಳಿತಿದ್ದು, ಅವರ ಪುಟ್ಟ ಮಗಳು ಆವ್ ತಲೆಗೆ ಅಡುಗೆಯವರ ಟೋಪಿ ಹಾಕಿಕೊಂಡು ರೆಸ್ಟೋರೆಂಟ್ ಗೆ ಕಸ್ಟಮರ್ ಆಗಿ ಬಂದ ಅಪ್ಪನ ಬಳಿ ತಿಂಡಿಯ ಆರ್ಡರ್ ಪಡೆಯುತ್ತಿದ್ದಾಳೆ.

ಫೋಟೊ ಜತೆ ಕ್ರಿಸ್ ರೆಸ್ಟೋರೆಂಟ್ ಕತೆ ಬರೆದಿದ್ದಾರೆ. ತಿಂಡಿ ವಿತರಣೆ ಸುಮಾರು 45 ನಿಮಿಷ ವಿಳಂಬವಾಯಿತು. ಏಕೆಂದರೆ, ಆವ್ ಆ ಸಮಯದಲ್ಲಿ ಪಾವ್ ಪೆಟ್ರೋಲ್ ಎಂಬ ಮಕ್ಕಳ ಶೋ ನೋಡುವ ಸಲುವಾಗಿ 20 ನಿಮಿಷ ಬ್ರೇಕ್ ಪಡೆದಳು. ಆದರೂ ಬೇಸರವಿಲ್ಲ. ಏಕೆಂದರೆ, ಅಡುಗೆಯಾಕೆ ತುಂಬಾ ಕ್ಯೂಟ್ ಇದ್ದಳು ಎಂದು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...