alex Certify ಮೃತಪಟ್ಟ ಫುಟ್ಬಾಲ್‌ ಆಟಗಾರನಿಗೆ ಹೃದಯಸ್ಪರ್ಶಿ ವಿದಾಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃತಪಟ್ಟ ಫುಟ್ಬಾಲ್‌ ಆಟಗಾರನಿಗೆ ಹೃದಯಸ್ಪರ್ಶಿ ವಿದಾಯ

ಫುಟ್ ಬಾಲ್ ತಂಡವೊಂದು ಮೃತಪಟ್ಟ ತಂಡದ ಸದಸ್ಯನಿಗೆ ವಿದಾಯವನ್ನು ವಿಶೇಷ ರೀತಿಯಲ್ಲಿ ರೂಪಿಸಿದ ವಿಡಿಯೋವೊಂದು ವೈರಲ್ ಆಗಿದೆ.

16 ವರ್ಷದ ಬಾಲಕ ಮೆಕ್ಸಿಕೋದಲ್ಲಿ ಪೊಲೀಸರ ಗುಂಡಿಗೆ ಆಕಸ್ಮಿಕವಾಗಿ ಬಲಿಯಾಗಿದ್ದ. ಆತನ ಫುಟ್ಬಾಲ್ ಟೀಮ್​ಮೇಟ್ಸ್​ ಪ್ರತಿದಿನ ಆತ ಫುಟ್​ಬಾಲ್​ ಆಡುತ್ತಿದ್ದ ಸ್ಥಳಕ್ಕೆ ಮೃತದೇಹವನ್ನು ಕೊಂಡೊಯ್ದು, ಆತ ಕೊನೆಯ ಗೋಲು ಹೊಡೆಯುವಂತೆ ಮಾಡಿ ಅಂತಿಮ ವಿದಾಯ ನೀಡಿದರು.

54 ಸೆಕೆಂಡಿನ ವಿಡಿಯೋದಲ್ಲಿ ಫುಟ್​ಬಾಲ್​ ಕೋರ್ಟ್​ನಲ್ಲಿ ಸ್ನೇಹಿತನ ಮೃತದೇಹ ಇರುವ ಪೆಟ್ಟಿಗೆ ಇಟ್ಟಿರುತ್ತಾರೆ. ತಂಡದ ಒಬ್ಬ ಸದಸ್ಯ ಬಾಲ್​ ಅನ್ನು ಮತ್ತೋರ್ವನಿಗೆ ಪಾಸ್​ ಮಾಡಿದಾಗ ಆತನ ಚೆಂಡನ್ನು ಕೆಫಿನ್​ ಕಡೆಗೆ ಒದೆಯುತ್ತಾನೆ. ಕೆಫಿನ್​ಗೆ ತಾಗಿದ ಬಾಲ್​ ಸೀದ ಗೋಲಿನೊಳಗೆ ಹೋಗುತ್ತದೆ. ಬಳಿಕ ಎಲ್ಲರೂ ಕೆಫಿನ್​ ಅನ್ನು ತಬ್ಬಿಕೊಂಡು ಅಗಲಿದ ಟೀಮ್​ಮೇಟ್​ಗೆ ಕಂಬನಿ ಮಿಡಿಯುತ್ತಾರೆ. ಈ ವೇಳೆ ಅಲ್ಲಿ ಸೇರಿದ್ದ ಗುಂಪು ಚಿಯರ್​ ಮಾಡಿರುವುದನ್ನು ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...