ಪುಟಾಣಿ ಮಕ್ಕಳಿಗೆ ಆಹಾರ ನೀಡೋದು ಎಂತಾ ಕಷ್ಟದ ಟಾಸ್ಕ್ ಅನ್ನೋದು ಪೋಷಕರಾಗಿದ್ದವರಿಗೆ ಗೊತ್ತು. ತರಹೇವಾರಿ ಪ್ಲಾನ್ ಬಳಸಿ ಮಕ್ಕಳಿಗೆ ಹಾಲುಣಿಸಬೇಕಾಗುತ್ತೆ. ಇದೇ ರೀತಿ ತಂದೆಯೊಬ್ಬ ತನ್ನ ಮಗಳಿಗೆ ಹಾಲನ್ನ ಕುಡಿಸೋಕೆ ಮಾಡಿದ ಪ್ಲಾನ್ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಹಿಟ್ ಆಗಿದೆ.
ವಿಡಿಯೋದಲ್ಲಿ ತಂದೆ, ತನ್ನ ಮಗಳಿಗೆ ಹಾಲನ್ನ ಕುಡಿಸೋಕೆ ಫೀಡಿಂಗ್ ಬಾಟಲಿ ಬಳಕೆ ಮಾಡೋದ್ರ ಬದಲು ಬೀರ್ ಬಾಂಗ್ ಬಳಸಿದ್ದಾರೆ. ಮಗುವಿನ ದೇಹಕ್ಕೆ ಕ್ಯಾಲೋರಿಯ ಅಗತ್ಯವಿರೋದ್ರಿಂದ ಹಾಲನ್ನ ಕುಡಿಯಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ತಂದೆ ಈ ಪ್ಲಾನ್ನ್ನು ಅನಸರಿಸಿದ್ದಾರೆ.
36 ವರ್ಷದ ರುಡಿ ವಿಲ್ಲಿಂಗ್ಹ್ಯಾಮ್ ಇನ್ಸ್ಟಾಗ್ರಾಂನಲ್ಲಿ ಈ ಕ್ಲಿಪ್ನ್ನು ಶೇರ್ ಮಾಡಿದ್ದಾರೆ. ವಿಡಿಯೋ ಆರಂಭದಲ್ಲಿ ತಂದೆ, ಮಗುವಿಗಾಗಿ ಹಾಲನ್ನ ತಯಾರಿಸ್ತಾರೆ. ಬಳಿಕ ಹಾಲನ್ನು ಬೀರ್ ನಳಿಕೆಗೆ ಹಾಕಿ ಕುಡಿಸುತ್ತಾರೆ. ಈ ವಿಡಿಯೋದಲ್ಲಿ ಮಗುವಿನ ಮುಖಭಾವ ಕೇಂದ್ರಬಿಂದುವಾಗಿದೆ.
ಮಗು ತೂಕ ಕಡಿಮೆಯ ಸಮಸ್ಯೆಯಿಂದ ಬಳಲುತ್ತಿದ್ದು ಆಕೆ ಹಾಲನ್ನ ಕುಡಿಯಲೇಬೇಕಾದ ಅನಿವಾರ್ಯತೆ ಇದೆ. ಬೀರ್ ನಳಿಕೆಯನ್ನ ಜಾಸ್ತಿ ಬಳಕೆ ಮಾಡಿದ್ದಕ್ಕೆ ನನ್ನ ತೂಕ ಸಿಕ್ಕಾಪಟ್ಟೆ ಹೆಚ್ಚಾಯ್ತು . ಇದೀಗ ಇದೇ ಪ್ಲಾನ್ನ್ನು ಮಗಳಿಗೂ ಬಳಕೆ ಮಾಡ್ತಿದ್ದೇನೆ ಎಂದು ಮಗುವಿನ ತಂದೆ ಹೇಳಿದ್ದಾರೆ.
https://www.instagram.com/p/CLmcLcEHl_A/?utm_source=ig_web_copy_link