alex Certify ನಗು ಮೂಡಿಸುತ್ತೆ ಮಗುವಿಗೆ ಹಾಲು ಕುಡಿಸೋಕೆ ಈ ತಂದೆ ಮಾಡಿದ ಪ್ಲಾನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಗು ಮೂಡಿಸುತ್ತೆ ಮಗುವಿಗೆ ಹಾಲು ಕುಡಿಸೋಕೆ ಈ ತಂದೆ ಮಾಡಿದ ಪ್ಲಾನ್

ಪುಟಾಣಿ ಮಕ್ಕಳಿಗೆ ಆಹಾರ ನೀಡೋದು ಎಂತಾ ಕಷ್ಟದ ಟಾಸ್ಕ್​ ಅನ್ನೋದು ಪೋಷಕರಾಗಿದ್ದವರಿಗೆ ಗೊತ್ತು. ತರಹೇವಾರಿ ಪ್ಲಾನ್​​ ಬಳಸಿ ಮಕ್ಕಳಿಗೆ ಹಾಲುಣಿಸಬೇಕಾಗುತ್ತೆ. ಇದೇ ರೀತಿ ತಂದೆಯೊಬ್ಬ ತನ್ನ ಮಗಳಿಗೆ ಹಾಲನ್ನ ಕುಡಿಸೋಕೆ ಮಾಡಿದ ಪ್ಲಾನ್​ ಮಾತ್ರ ಸೋಶಿಯಲ್​ ಮೀಡಿಯಾದಲ್ಲಿ ಹಿಟ್​ ಆಗಿದೆ.

ವಿಡಿಯೋದಲ್ಲಿ ತಂದೆ, ತನ್ನ ಮಗಳಿಗೆ ಹಾಲನ್ನ ಕುಡಿಸೋಕೆ ಫೀಡಿಂಗ್​ ಬಾಟಲಿ ಬಳಕೆ ಮಾಡೋದ್ರ ಬದಲು ಬೀರ್​ ಬಾಂಗ್​​ ಬಳಸಿದ್ದಾರೆ. ಮಗುವಿನ ದೇಹಕ್ಕೆ ಕ್ಯಾಲೋರಿಯ ಅಗತ್ಯವಿರೋದ್ರಿಂದ ಹಾಲನ್ನ ಕುಡಿಯಲೇಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ತಂದೆ ಈ ಪ್ಲಾನ್​ನ್ನು ಅನಸರಿಸಿದ್ದಾರೆ.

36 ವರ್ಷದ ರುಡಿ ವಿಲ್ಲಿಂಗ್​ಹ್ಯಾಮ್​​ ಇನ್​ಸ್ಟಾಗ್ರಾಂನಲ್ಲಿ ಈ ಕ್ಲಿಪ್​ನ್ನು ಶೇರ್​ ಮಾಡಿದ್ದಾರೆ. ವಿಡಿಯೋ ಆರಂಭದಲ್ಲಿ ತಂದೆ, ಮಗುವಿಗಾಗಿ ಹಾಲನ್ನ ತಯಾರಿಸ್ತಾರೆ. ಬಳಿಕ ಹಾಲನ್ನು ಬೀರ್​ ನಳಿಕೆಗೆ ಹಾಕಿ ಕುಡಿಸುತ್ತಾರೆ. ಈ ವಿಡಿಯೋದಲ್ಲಿ ಮಗುವಿನ ಮುಖಭಾವ ಕೇಂದ್ರಬಿಂದುವಾಗಿದೆ.

ಮಗು ತೂಕ ಕಡಿಮೆಯ ಸಮಸ್ಯೆಯಿಂದ ಬಳಲುತ್ತಿದ್ದು ಆಕೆ ಹಾಲನ್ನ ಕುಡಿಯಲೇಬೇಕಾದ ಅನಿವಾರ್ಯತೆ ಇದೆ. ಬೀರ್​ ನಳಿಕೆಯನ್ನ ಜಾಸ್ತಿ ಬಳಕೆ ಮಾಡಿದ್ದಕ್ಕೆ ನನ್ನ ತೂಕ ಸಿಕ್ಕಾಪಟ್ಟೆ ಹೆಚ್ಚಾಯ್ತು . ಇದೀಗ ಇದೇ ಪ್ಲಾನ್​ನ್ನು ಮಗಳಿಗೂ ಬಳಕೆ ಮಾಡ್ತಿದ್ದೇನೆ ಎಂದು ಮಗುವಿನ ತಂದೆ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...