alex Certify ಶ್ವಾನದ ಆರೈಕೆಗಾಗಿ 5 ಮಿಲಿಯನ್ ಡಾಲರ್ ಆಸ್ತಿ ಬರೆದಿಟ್ಟ ಮಾಲೀಕ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ಆರೈಕೆಗಾಗಿ 5 ಮಿಲಿಯನ್ ಡಾಲರ್ ಆಸ್ತಿ ಬರೆದಿಟ್ಟ ಮಾಲೀಕ..!

ಶ್ವಾನವನ್ನ ಸಾಕಿದವರಿಗೆ ಮಾತ್ರ ಅದರ ಪ್ರೀತಿ ಏನು ಅನ್ನೋದು ಗೊತ್ತಿರುತ್ತೆ. ಹೀಗಾಗಿ ಶ್ವಾನಕ್ಕೆ ಬೇಕಾದ ಎಲ್ಲಾ ಸೌಕರ್ಯಗಳನ್ನೂ ಮಾಲೀಕ ಪೂರೈಸುತ್ತಾನೆ.

ಆದರೆ ಮಾಲೀಕನೇ ಸಾವಿಗೀಡಾದ್ರೆ ಶ್ವಾನದ ಕತೆಯೇನು..? ಎಂಬ ಪ್ರಶ್ನೆ ಮೂಡೋದು ಸಹಜ. ಆದರೆ ಇಲ್ಲೊಬ್ಬ ಉದ್ಯಮಿ ತನ್ನ ಆಸ್ತಿಯಲ್ಲಿ 5 ಮಿಲಿಯನ್ ಡಾಲರ್​ ಹಣವನ್ನ ಸಾಕು ಶ್ವಾನದ ಆರೈಕೆಗೆ ಮೀಸಲಿಟ್ಟಿದ್ದಾನೆ ಎನ್ನಲಾಗಿದೆ.

ಬಾರ್ಡರ್​ ಕೊಲ್ಲಿ ಜಾತಿಗೆ ಸೇರಿದ 8 ವರ್ಷದ ಲುಲು ಎಂಬ ಶ್ವಾನದ ಮಾಲೀಕ ಬಿಲ್​ ಡೋರೀಸ್​ ಕಳೆದ ವರ್ಷ ನಿಧನರಾಗಿದ್ದಾರೆ. ಅವಿವಾಹಿತನಾಗಿದ್ದ ಈ ಉದ್ಯಮಿ ತನ್ನ ಆಸ್ತಿಯನ್ನ ಶ್ವಾನದ ಆರೈಕೆಗೆ ಮೀಸಲಿಟ್ಟಿದ್ದಾನೆ ಎನ್ನಲಾಗಿದೆ.

ಸಧ್ಯ ಈ ಶ್ವಾನವನ್ನ ಮಾರ್ಥಾ ಬರ್ಟೋನ್​ ಎಂಬವರು ನೋಡಿಕೊಳ್ತಿದ್ದಾರೆ. ಡೋರೀಸ್​ ತನ್ನ ಆಸ್ತಿ ಪತ್ರದಲ್ಲಿ ತನ್ನ ಹಣವನ್ನ ಟ್ರಸ್ಟ್​ ಒಂದರಲ್ಲಿ ಇಡಬೇಕು ಹಾಗೂ ಈ ಹಣವನ್ನ ಲುಲು ಆರೈಕೆಗೆ ಬಳಕೆ ಮಾಡಬೇಕು ಎಂದು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.

ಆತ ಈ ಹೆಣ್ಣು ಶ್ವಾನವನ್ನ ತುಂಬಾನೇ ಪ್ರೀತಿಸುತ್ತಿದ್ದ ಎಂದು ಶ್ವಾನದ ಆರೈಕೆ ಮಾಡುತ್ತಿರುವ ಮಾರ್ಥಾ ಬರ್ಟೋನ್​​ ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...