alex Certify ಮಾಸ್ಕ್​ ಧರಿಸಲು ನಿರಾಕರಿಸಿದ ಪ್ರಯಾಣಿಕನಿಗೆ ಚಾಲಕ ಕರೆದುಕೊಂಡು ಹೋಗಿದ್ದೆಲ್ಲಿಗೆ…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾಸ್ಕ್​ ಧರಿಸಲು ನಿರಾಕರಿಸಿದ ಪ್ರಯಾಣಿಕನಿಗೆ ಚಾಲಕ ಕರೆದುಕೊಂಡು ಹೋಗಿದ್ದೆಲ್ಲಿಗೆ…?

ಕೊರೊನಾ ವೈರಸ್​ನಿಂದ ವಿಶ್ವಾದ್ಯಂತ 85 ದಶಲಕ್ಷಕ್ಕೂ ಹೆಚ್ಚು ಮಂದಿ ಸೋಂಕಿಗೆ ಒಳಗಾಗಿದ್ದರೂ ಸಹ ಫೇಸ್​ ಮಾಸ್ಕ್​ ಧರಿಸಲು ನಿರಾಕರಿಸುವ ಹಾಗೂ ವೈರಸ್​ ನಿಜವಲ್ಲ ಎಂದು ನಂಬುವ ಮೂರ್ಖ ಜನರು ಇನ್ನೂ ನಮ್ಮ ನಡುವೆ ಇದ್ದಾರೆ.

ಈಗಾಗಲೇ ಕೊರೊನಾ ವೈರಸ್​ ನಿಜವಲ್ಲ ಎಂದು ಪ್ರತಿಪಾದಿಸುತ್ತಾ ಬೀದಿಗಳಲ್ಲಿ ಮಾಸ್ಕ್​ ಧರಿಸದೇ ಪ್ರತಿಭಟನೆ ಮಾಡುತ್ತಿರುವ ಅನೇಕ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಾಂಕ್ರಾಮಿಕ ರೋಗವನ್ನ ಗಂಭೀರವಾಗಿ ಪರಿಗಣಿಸಲು ನಿರಾಕರಿಸಿದ ಅನೇಕ ಮಂದಿ ಲಾಕ್​ಡೌನ್​ ನಿಯಮಗಳನ್ನ ಉಲ್ಲಂಘಿಸುತ್ತಿದ್ದಾರೆ.

ಇನ್ನು ಫೇಸ್​ಮಾಸ್ಕ್​ಗಳ ವಿಚಾರಕ್ಕೆ ಬರೋದಾದ್ರೆ, ಕೊರೊನಾ ವೈರಸ್​ ಹರಡುವಿಕೆ ನಿಂತಿದೆ ಎಂದು ಭಾವಿಸಿದ ಅನೇಕರು ಅವುಗಳನ್ನ ಮುಖಕ್ಕೆ ಧರಿಸೋದನ್ನೇ ನಿಲ್ಲಿಸಿದ್ದಾರಂತೆ.

ಅದರೆ ಇಂತಹ ಸಮಾಜಘಾತುಕರ ನಡುವೆ ಕೊರೊನಾ ಮಾರ್ಗಸೂಚಿಗಳನ್ನ ಪಾಲಿಸದ ಜನರಿಗೆ ತಕ್ಕಪಾಠ ಕಲಿಸುವಂತಹ ಪ್ರಜ್ಞಾವಂತ ನಾಗರಿಕರೂ ನಮ್ಮೊಡನೆ ಇದ್ದಾರೆ.

ಸವಾರಿ ಸಮಯದಲ್ಲಿ ಫೇಸ್​ಮಾಸ್ಕ್​ ಧರಿಸಲು ನಿರಾಕರಿಸಿದ ಪಾನಮತ್ತನಾಗಿದ್ದ ಪ್ರಯಾಣಿಕನನ್ನ ಹೊಸ ವರ್ಷದ ದಿನವೇ ವ್ಯಾಂಕೋವರ್​ ಟ್ಯಾಕ್ಸಿ ಡ್ರೈವರ್​ ಪೊಲೀಸ್​ ಠಾಣೆ ಮೆಟ್ಟಿಲು ಹತ್ತಿಸಿದ್ದಾನೆ. ಪೊಲೀಸ್​ ಠಾಣೆಯಲ್ಲಿ ಆತನಿಗೆ $690 (50,347.54 ರೂ.) ದಂಡ ವಿಧಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...