alex Certify 20 ನಿಮಿಷದಲ್ಲಿ ಈ ಬರ್ಗರ್ ತಿಂದವರಿಗೆ ಬಂಪರ್‌ ಕೊಡುಗೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

20 ನಿಮಿಷದಲ್ಲಿ ಈ ಬರ್ಗರ್ ತಿಂದವರಿಗೆ ಬಂಪರ್‌ ಕೊಡುಗೆ…!

ಸಾಮಾನ್ಯವಾಗಿ ಒಂದು ಬರ್ಗರ್ ತಿನ್ನಲು ನೀವೆಷ್ಟು ಸಮಯ ತೆಗೆದುಕೊಳ್ಳುತ್ತೀರಿ? ಇಲ್ಲೊಂದು ಸವಾಲು ನಿಮ್ಮ ಎದುರಿಗಿದೆ.

ಯುಕೆ ನಲ್ಲಿ ಬರ್ಗರ್ ತಿನ್ನುವ ಸವಾಲೊಂದು ಎದುರಿಗಿದೆ. 20 ನಿಮಿಷದಲ್ಲಿ ಈ ಬರ್ಗರ್ ತಿಂದರೆ 1000 ಡಾಲರ್ ಅಂದರೆ ಅಂದಾಜು 75 ಸಾವಿರ ರೂ. ನಿಮ್ಮದಾಗಲಿದೆ.

ಪ್ರೆಸ್ಟನ್ ನ್ನಲ್ಲಿರುವ ಕೆಬಾಬಿಸ್ತಾನ್ ಎಂಬ ರೆಸ್ಟೋರೆಂಟ್ ನಲ್ಲಿ 14 ಇಂಚು ಅಳತೆಯ ಬರ್ಗರ್ ಸಿದ್ಧಪಡಿಸಿ, ಜನರಿಗೆ ಸವಾಲು ಹಾಕಲಾಗಿದೆ.

ಕುರಿ ಮಾಂಸ, ಚೀಸ್, ಟೊಮೆಟೊ, ಸೌತೆಕಾಯಿ, ಮಸಾಲೆ ಹಾಕಿ ಬೃಹತ್ತಾದ ಬರ್ಗರ್ ಅನ್ನು ತಯಾರಿಸಲಾಗಿದೆ, ಇದು ಹತ್ತು ಮಂದಿಯ ಹೊಟ್ಟೆ ತುಂಬಿಸಬಹುದು ಎಂದು ರೆಸ್ಟೋರೆಂಟ್ ಮಾಲಿಕ ಯೂನಸ್ ಸೆವೆನಿಕ್ ಹೇಳಿದ್ದಾರೆ.

ಲಾಕ್ಡೌನ್ ಕಾರಣದಿಂದ ರೆಸ್ಟೋರೆಂಟ್ ವ್ಯವಹಾರ ಸಂಪೂರ್ಣ ಕುಸಿದಿದ್ದು, ಈಸಂದರ್ಭದಲ್ಲಿ ಗ್ರಾಹಕರನ್ನು ಸೆಳೆಯಲು ಅಪರೂಪದ ಆಫರ್ ನೀಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...