alex Certify ಸಂಗೀತ ಪ್ರಿಯರಿಗೆ ಭರ್ಜರಿ ಆಫರ್​ ನೀಡಿದ ಟ್ಯಾಕ್ಸಿ ಡ್ರೈವರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಂಗೀತ ಪ್ರಿಯರಿಗೆ ಭರ್ಜರಿ ಆಫರ್​ ನೀಡಿದ ಟ್ಯಾಕ್ಸಿ ಡ್ರೈವರ್

ಥೈವಾನ್​ನ ಸಂಗೀತ ಪ್ರಿಯ ಟ್ಯಾಕ್ಸಿ ಡ್ರೈವರ್ ಒಬ್ಬ ತನ್ನ ಗ್ರಾಹಕರಿಗೆ ವಿಶೇಷ ಆಫರ್​ ಒಂದನ್ನ ನೀಡಿದ್ದಾನೆ. ಈತನ ಜೊತೆ ಪ್ರಯಾಣ ಮಾಡುವ ಗ್ರಾಹಕರಿಗೆ ಕರೋಕೆ ಹೇಳಲು ಬರುವವರಾಗಿದ್ರೆ ಅಂತವರಿಗೆ ಈತನ ಟ್ಯಾಕ್ಸಿಯಲ್ಲಿ ಫ್ರೀ ಡ್ರೈವಿಂಗ್​ ಅವಕಾಶ ಸಿಗಲಿದೆ. ಈ ಟ್ಯಾಕ್ಸಿ ಡ್ರೈವರ್​ ತನ್ನ ವಾಹನದ ಒಳಗೆಯೇ ಕರೋಕೆಗೆ ಬೇಕಾದ ಎಲ್ಲಾ ಸಂಗೀತ ಸಾಧನಗಳನ್ನ ಅಳವಡಿಸಿದ್ದಾನೆ.

ಈ ಟ್ಯಾಕ್ಸಿ ಡ್ರೈವರ್​​ನನ್ನು ತು ಚಿಂಗ್​ ಲಿಯಾಂಗ್​ ಎಂದು ಗುರುತಿಸಲಾಗಿದೆ. ತನ್ನ ಜೊತೆ ಕಾರು ಪ್ರಯಾಣ ಮಾಡುವ ವೇಳೆ ಕರೋಕೆ ಪ್ರದರ್ಶನದಲ್ಲಿ ಭಾಗಿಯಾದರೆ ಅವರಿಗೆ ಉಚಿತ ಸವಾರಿ ಸೌಲಭ್ಯವನ್ನ ನೀಡುತ್ತಾರೆ. ಹಾಗಂತ ಈ ಸೌಲಭ್ಯ ನೀಡಲು ಹೋಗಿ ಲಿಯಾಂಗ್​ ತಮ್ಮ ಉದ್ಯಮದಲ್ಲಿ ನಷ್ಟ ಅನುಭವಿಸುತ್ತಾರೆ ಎಂದು ನೀವೆಂದುಕೊಂಡಿದ್ದರೆ ನಿಮ್ಮ ಊಹೆ ನಿಜಕ್ಕೂ ತಪ್ಪು.

ತಮ್ಮ ಹರ್ಷಚಿತ್ತದ ವರ್ತನೆ ಮೂಲಕವೇ ಲಿಯಾಂಗ್​ ತಮ್ಮ ಗ್ರಾಹಕರಿಗೆ ಅವರಲ್ಲಿ ಅಡಗಿರುವ ಪ್ರತಿಭೆಯನ್ನ ಹೊರತರೋಕೆ ಪ್ರೇರಣೆ ನೀಡ್ತಾರೆ. ಕೆಲ ಗ್ರಾಹಕರಂತೂ ಖುಷಿಯಿಂದ ನಿಗದಿತ ದರಕ್ಕಿಂತ ದುಪ್ಪಟ್ಟು ಹಣವನ್ನ ಟಿಪ್ಸ್ ರೂಪದಲ್ಲಿ ನೀಡುತ್ತಾರೆ. 57 ವರ್ಷದ ಈ ಚಾಲಕ 27 ವರ್ಷಗಳಿಂದ ಟ್ಯಾಕ್ದಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದಾರೆ. ಕಳೆದ 8 ವರ್ಷಗಳಿಂದ ಕರೋಕೆ ಪ್ರಿಯರಿಗೆ ಈ ಆಫರ್​ ನೀಡ್ತಿದ್ದಾರೆ.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...